ಕರ್ನಾಟಕಪ್ರಮುಖ ಸುದ್ದಿ

ಪ್ರೊ.ಮಹೇಶ್‍ಚಂದ್ರಗುರು ವಜಾಕ್ಕೆ ರಾಜ್ಯಪಾಲರಿಗೆ ಪತ್ರ : ಸಂಸದೆ ಶೋಭಾ ಕರಂದ್ಲಾಜೆ

ಬಳ್ಳಾರಿ, ಜೂ. 27 : ಮೈಸೂರಿನಲ್ಲಿರುವ ಕರ್ನಾಟಕ ಕಲಾಮಂದಿರದ ಮನೆಯಂಗಳ ಸಭಾಂಗಣದಲ್ಲಿ ಗೋಮಾಂಸ ಸೇವಿಸಿರುವ ಮೈಸೂರು ವಿವಿ ಪ್ರಾಧ್ಯಾಪಕ ಪ್ರೊ.ಮಹೇಶ್ ಚಂದ್ರ ಗುರು ಅವರ ವಜಾಕ್ಕೆ ಒತ್ತಾಯಿಸಿ ರಾಜ್ಯಪಾಲ ವಜೂಭಾಯಿ ವಾಲಾರಿಗೆ ಪತ್ರ ಬರೆದಿರುವುದಾಗಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಸಂಸದೆ ಶೋಭಾ ಅವರು ಈ ಕುರಿತು ಬಳ್ಳಾರಿಯಲ್ಲಿ ಹೇಳಿಕೆ ನೀಡಿದ್ದು, ಸಾಹಿತಿ ಕೆ.ಎಸ್. ಭಗವಾನ್ ಹಾಗೂ ಪ್ರೊ.ಮಹೇಶಚಂದ್ರಗುರು ಅವರು ಸರ್ಕಾರಿ ಕಟ್ಟಡದಲ್ಲಿ ಗೋಮಾಂಸ ಭಕ್ಷಣೆ ಮಾಡಿರುವುದು ಸರಿಯಲ್ಲ. ಅವರು ಮೈಸೂರು ವಿವಿ ಪ್ರೊಫೆಸರ್ ಆಗಿದ್ದಾರೆ. ಪ್ರೊಫೆಸರ್ ಆಗಿ ಈ ರೀತಿ ಮಾಡಿದ್ದು ಸರಿಯಲ್ಲ. ಅವರು ಕೇಂದ್ರ ಸರಕಾರದ ವಿರುದ್ಧವೂ ಘೋಷಣೆ ಕೂಗಿದ್ದಾರೆ. ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ. ರಾಜ್ಯಪಾಲರು ಮಹೇಶ್ಚಂದ್ರಗುರು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎನ್ನುವ ಭರವಸೆ ತಮಗಿದೆ ಎಂದು ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

-ಎನ್.ಬಿ.

Leave a Reply

comments

Related Articles

error: