ಪ್ರಮುಖ ಸುದ್ದಿ

ವೃದ್ಧ ಮಹಿಳೆಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಪುಷ್ಪಾ ಅಮರ್‌ನಾಥ್

ಪ್ರಮುಖ ಸುದ್ದಿ, ಹುಣಸೂರು, ಜೂ.27: ಅಪಘಾತದಿಂದ ಕಾಲುಮುರಿತಕ್ಕೊಳಗಾಗಿ ಬಸ್ ನಿಲ್ದಾಣದಲ್ಲೇ ಅಸ್ವಸ್ಥಳಾಗಿ ನರಳುತ್ತಿದ್ದ ವೃದ್ದೆಯೊಬ್ಬರಿಗೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಪುಷ್ಪಾ ಅಮರ್ ನಾಥ್ ನೆರವಿನ ಹಸ್ತ ಚಾಚಿದ್ದಾರೆ.
ತಾಲೂಕಿನ ಬನ್ನಿಕುಪ್ಪೆ ಗೇಟ್ ಬಳಿ ಅಪರಿಚಿತ ಮಹಿಳೆಯೊಬ್ಬರು ಕಳೆದ ದಿನಗಳಿಂದ ಆಶ್ರಯ ಪಡೆದಿದ್ದು, ಅಪಘಾತದಿಂದಾಗಿ ಕಾಲುಮುರಿದು ಚಿಕಿತ್ಸೆ ಪಡೆಯಲಾಗದೆ ನರಳಾಡುತ್ತಾ ಬಸ್ ನಿಲ್ದಾಣದಲ್ಲಿಯೇ ಮಲಗಿದ್ದರು. ವೃದ್ಧೆಯ ನರಳಾಟ ನೋಡಲಾಗದ ಸಾರ್ವಜನಿಕರು ಪುಷ್ಪಾ ಅಮರ್‌ನಾಥ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪುಷ್ಪಾ ಅಮರ್‌ನಾಥ್, ಅಕೆಯನ್ನು ಸಾರ್ವಜನಿಕರ ನೆರವಿನೊಂದಿಗೆ ಸಾರ್ವಜನಿಕ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಿದರು. ಈ ಮೂಲಕ ವೃದ್ಧ ಮಹಿಳೆಯ ನರೆವಿಗೆ ನಿಂತು ಮಾನವೀಯತೆ ಮೆರೆದಿದ್ದಾರೆ. (ವರದಿ ಬಿ.ಎಂ)

Leave a Reply

comments

Related Articles

error: