ಮೈಸೂರು

ಶ್ರೀಗಳ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಂಸದ ಪ್ರತಾಪಸಿಂಹ

ಮೈಸೂರು,ಜೂ.27-ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಪೇಜಾವರ ಶ್ರೀಗಳು ಇಫ್ತಾರ್ ಕೂಟ ಆಯೋಜಿಸಿದ್ದಕ್ಕೆ ಅನೇಕರಿಂದ ಟೀಕೆಗಳು ವ್ಯಕ್ತವಾಗುತ್ತಿದ್ದರೆ, ಸಂಸದ ಪ್ರತಾಪಸಿಂಹ ಅವರು ಮಾತ್ರ ಶ್ರೀಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಪೇಜಾವರ ಶ್ರೀಗಳು ಸಮಾಜದಲ್ಲಿ ಸಾಮರಸ್ಯ ಸ್ಥಾಪಿಸುವ ಕೆಲಸ ಮಾಡಿದ್ದಾರೆ. ಶ್ರೀಗಳ ಪ್ರಯತ್ನವನ್ನ ಸಾಹಸವೇನ್ನಬಹುದು. ಅವರ ಪ್ರಯತ್ನದ ಹಿಂದಿರುವ ಸದುದ್ದೇಶವನ್ನ ಅರ್ಥ ಮಾಡಿಕೊಳ್ಳುವುದು ಒಳಿತು. ಅದರಲ್ಲಿ ಹುಳುಕು ಹುಡುಕುವ ಕೆಲಸ ಮಾಡಬೇಡಿ. ಹಿಂದು ಧರ್ಮ, ರಾಷ್ಟ್ರೀಯತೆ ಬಗ್ಗೆ ಪೇಜಾವರ ಶ್ರೀಗಳಿಗಿರುವ ಬದ್ಧತೆಯನ್ನು ಪ್ರಶ್ನಿಸುವ ಕನಿಷ್ಠ ಅರ್ಹತೆ ನಮಗ್ಯಾರಿಗೂ ಇಲ್ಲ ಎಂದು ಟ್ವಿಟರ್ ಹಾಗೂ ಫೇಸ್ ಬುಕ್ ನಲ್ಲಿ ತಮ್ಮ ಅಭಿಪ್ರಾಯ ಮಂಡಿಸುವ ಮೂಲಕ ಸಂಸದ ಶ್ರೀಗಳ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ವರದಿ-ಎಸ್.ಎನ್, ಎಂ.ಎನ್)

 

Leave a Reply

comments

Related Articles

error: