ಕರ್ನಾಟಕಪ್ರಮುಖ ಸುದ್ದಿ

ದೇವೇಗೌಡರ ಕಾಲಿಗೆ ನಮಸ್ಕರಿಸಿದ ಡಿ.ಕೆ. ಶಿವಕುಮಾರ್!

ಬೆಂಗಳೂರು, ಜೂ.27 : ರಾಜ್ಯದ ರಾಜಕೀಯದಲ್ಲಿ ಅದರಲ್ಲೂ ಹಳೇ ಮೈಸೂರಿನ ಗೌಡರ ಪಾಳೇಪಟ್ಟಿನಲ್ಲಿ ಕಡು ವೈರಿಗಳಾದ ಮಾಜಿ ಪ್ರಧಾನಿ ಎಚ್‍.ಡಿ. ದೇವೇಗೌಡ ಮತ್ತು ಡಿ.ಕೆ. ಶಿವಕುಮಾರ್ ಅವರು ಇಂದು ಅಪರೂಪದ ಪ್ರಸಂಗಕ್ಕೆ ಸಾಕ್ಷಿಯಾದರು.

ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಹಮ್ಮಿಕೊಂಡಿದ್ದ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ದೇವೇಗೌಡರ ಕಾಲಿಗೆ ನಮಸ್ಕರಿಸಿದರು. ವೇದಿಕೆಯಲ್ಲಿ ಆಸೀನರಾಗಿದ್ದ ಎಲ್ಲ ಗಣ್ಯರ ಕಾಲಿಗೆ ನಮಸ್ಕರಿಸಿದ ಡಿ.ಕೆ. ಶಿವಕುಮಾರ್ ಅವರು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಅವರ ಕಾಲಿಗೂ ನಮಸ್ಕರಿಸಿದರು. ಗೌಡರು ಸಹ ಆಶೀರ್ವದಿಸಿ ನಗುತ್ತಾ ಹಸ್ತಲಾಘವ ಮಾಡಿದರು.

ಈ ಘಟನೆ ಸಮಾರಂಭದಲ್ಲಿ ನೆರೆದಿದ್ದ ಗಣ್ಯರು ಮತ್ತು ಜನರನ್ನು ಚಕಿತಗೊಳಿಸಿತು. ಮುಂದಿನ ದಿನಗಳಲ್ಲಿ ಗೌಡರು ಮತ್ತು ಡಿ.ಕೆ.ಶಿ. ವೈಮನಸ್ಸು ಮರೆಯುತ್ತಾರಾ ಎಂದು ಜನ ಮಾತನಾಡಿಕೊಳ್ಳುತ್ತಿದು ಕಂಡುಬಂತು.

ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು, ಸರ್ವಧರ್ಮ ಸಮಭಾವದ ಮಾರ್ಗದರ್ಶಿ ಸೂತ್ರ ಕೊಟ್ಟ ಕೆಂಪೇಗೌಡರು ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಗೆ ಸ್ಫೂರ್ತಿ. 12ನೇ ಶತಮಾನದಲ್ಲಿ ಬಸವಣ್ಣನವರ ಪ್ರಜಾತಂತ್ರ ಸೂತ್ರ ನೀಡಿದರೆ 15ನೇ ಶತಮಾನದಲ್ಲಿ ಕೆಂಪೇಗೌಡರು ಆಡಳಿತ ಸೂತ್ರವನ್ನು ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.

ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರನ್ನ ಸ್ವತಃ ದೇವೇಗೌಡರೇ ಎದ್ದು ನಿಂತು ಹಸ್ತಲಾಘವ ಮಾಡಿ ಬರಮಾಡಿಕೊಂಡರು.

-ಎನ್.ಬಿ.

Leave a Reply

comments

Related Articles

error: