ಕರ್ನಾಟಕಪ್ರಮುಖ ಸುದ್ದಿಮೈಸೂರು

ಆಕರ್ಷಕ ಜಂಬೂ ಸವಾರಿಗೆ ಚಾಲನೆ

ಐತಿಹಾಸಿಕ ಮೈಸೂರು ದಸರಾ ಉತ್ಸವದ ಆಕರ್ಷಣೆಯ ಕೇಂದ್ರ ಬಿಂದು ಜಂಬೂ ಸವಾರಿಗೆ ಮುಖ್ಯಮಂತ್ರಿ  ಸಿದ್ದರಾಮಯ್ಯ ಚಾಲನೆ ನೀಡಿದರು.  ವಿಶೇಷ ವೇದಿಕೆ ಏರಿ ನಾಡದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆಗೈಯ್ಯುವ ಮೂಲಕ  ಚಾಲನೆ ನೀಡಿದರು. ಮುಖ್ಯಮಂತ್ರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಜಿಲ್ಲಾಧಿಕಾರಿ ಡಿ.ರಂದೀಪ್, ಪೊಲೀಸ್ ಆಯುಕ್ತ ಬಿ. ದಯಾನಂದ್, ಮೇಯರ್ ಬಿ.ಎಲ್.ಭೈರಪ್ಪ ಸಾಥ್ ನೀಡಿದರು.

ನಾಡದೇವತೆ ಶ್ರೀಚಾಮುಂಡೇಶ್ವರಿ ಉತ್ಸವ ಮೂರ್ತಿ ವಿರಾಜಮಾನಳಾಗಿರುವ 750ಕೆ.ಜಿ ಚಿನ್ನದ ಅಂಬಾರಿಯನ್ನು ಹೊತ್ತ ಅರ್ಜುನ ಗಜ ಗಾಂಭೀರ್ಯದೊಂದಿಗೆ ಹೆಜ್ಜೆ ಹಾಕುತ್ತಿರುವುದು ಕಂಡು ಬಂತು. ಬಣ್ಣ ಬಣ್ಣದ ಚಿತ್ತಾರ ಹಾಗೂ ಆಭರಣಗಳಿಂದ ಶೃಂಗಾರಗೊಂಡ ಅರ್ಜುನ ಐದನೇ ಬಾರಿ ಅಂಬಾರಿ ಹೊರುತ್ತಿದ್ದಾನೆ.   ಮಾಸ್ತಿ ಅವರ ಮರಣಾನಂತರ ಅವರ ಮಗ ಸಣ್ಣಪ್ಪ ಇದೇ ಮೊದಲ ಬಾರಿಗೆ ಅರ್ಜುನನಿಗೆ ಸಾರಥಿಯಾಗಿದ್ದು, ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

ಅರ್ಜುನನಿಗೆ ಆನೆಗಳಾದ ವಿಜಯಾ ಮತ್ತು ಕಾವೇರಿ ಸಾಥ್ ನೀಡಿದರು. 21 ಸುತ್ತು ಕುಶಾಲು ತೋಪು ಸಿಡಿಸಿ ಗೌರವ ಸೂಚಿಸಲಾಯಿತು. ಅಶ್ವಾರೋಹಿದಳ, ಪೊಲೀಸ್ ವಾದ್ಯವೃಂದ, ಅಗ್ನಿಶಾಮಕ ದಳದವರು ಜಂಬೂ ಸವಾರಿಯ ಜೊತೆ ಸಾಗಿದ್ದಾರೆ. ಜಂಬೂ ಸವಾರಿಯು ಆಯುರ್ವೇದ ವೃತ್ತದ ಮೂಲಕ ತೆರಳಿ ಸಯ್ಯಾಜಿರಾವ್ ವೃತ್ತ, ಕೆ.ಆರ್.ವೃತ್ತದ ಮೂಲಕ ಸಾಗಿ ಬನ್ನಿಮಂಟಪವನ್ನು ಪ್ರವೇಶಿಸಲಿದೆ.

Leave a Reply

comments

Related Articles

error: