ಕರ್ನಾಟಕ

ಶ್ರೀಗಳ ಕ್ರಮ ಭಾವೈಕ್ಯತೆಯ ಸಂಕೇತ: ಎಚ್.ಆಂಜನೇಯ

ಬೆಂಗಳೂರು,ಜೂ.27-ಪೇಜಾವರ ಶ್ರೀಗಳು ಯಾವುದೇ ತಪ್ಪು ಮಾಡಿಲ್ಲ. ಪೇಜಾವರ ಶ್ರೀಗಳ ಕ್ರಮ ಭಾವೈಕ್ಯತೆಯ ಸಂಕೇತ ಎಂದು ಸಚಿವ ಎಚ್.ಆಂಜನೇಯ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ಶ್ರೀಗಳು ಹಿಂದೂ ಮತ್ತು ಮುಸ್ಲಿಂ ಧರ್ಮಗಳ ನಡುವೆ ಸೌಹಾರ್ದ ಸಂಬಂಧ ಏರ್ಪಡಲು ಕಾರಣರಾಗಿದ್ದಾರೆ. ಅವರ ಈ ಕ್ರಮವನ್ನು ಟೀಕಿಸುವುದು ಸರಿಯಲ್ಲ ಎಂದಿದ್ದಾರೆ.

ಉಡುಪಿ ಮಠಕ್ಕೂ ಮುಸ್ಲಿಂ ಸಮುದಾಯಕ್ಕೂ ಅವಿನಾಭಾವ ಸಂಬಂಧವಿದೆ. ಅಲ್ಲದೆ ಕೋಮು ದಳ್ಳುರಿಯಿಂದ ಬೇಯುತ್ತಿರುವ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಾಯಕ್ಕೆ ಶ್ರೀಗಳು ನಡೆಸಿದ ಇಫ್ತಾರ್ ಕೂಟ ದಿಂದ ಮುಲಾಮು ಹಚ್ಚಿದಂತಾಗಿದೆ. ಹೀಗಾಗಿ ಅವರ ಕೆಲಸಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದರು.

ಮೈಸೂರಿನಲ್ಲಿ ಗೋಮಾಂಸ ಭಕ್ಷಣೆ ಮಾಡಿರುವ ಬಗ್ಗೆ ಪ್ರಶ್ನಿಸಿದಾಗ ಆಹಾರ ಪದ್ಧತಿ ಎಲ್ಲರ ಹಕ್ಕು. ನೀವು ಇಂತಹದ್ದನ್ನು ಮಾತ್ರ ತಿನ್ನಬೇಕು ಎಂದು ಯಾರಿಗೂ ಷರತ್ತು ವಿಧಿಸಲು ಸಾಧ್ಯವಿಲ್ಲ. ಬಿಜೆಪಿಯವರು ಅನಗತ್ಯ ವಿಷಯಗಳ ಬಗ್ಗೆ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು. (ವರದಿ-ಎಸ್.ಎನ್, ಎಂ.ಎನ್)

 

Leave a Reply

comments

Related Articles

error: