ಪ್ರಮುಖ ಸುದ್ದಿ

ಪಿಜಿ ವ್ಯವಹಾರದಲ್ಲಿ ನಷ್ಟ: ತಾಯಿ, ಮಗ ಆತ್ಮಹತ್ಯೆ

ಪ್ರಮುಖ ಸುದ್ದಿ, ಬೆಂಗಳೂರು, ಜೂ.27: ಪಿಜಿ ವ್ಯವಹಾರದಲ್ಲಿ ನಷ್ಟ ಸಂಭವಿಸಿದ್ದರಿಂದ ಮನನೊಂದು ತಾಯಿ-ಮಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೇರಳದ ಸುಮಿದಾ ನಾಜಿಮ್ (42) ಮತ್ತು ಮೊಹಮ್ಮದ್ ನಾಜಿಮ್ (25) ಆತ್ಮಹತ್ಯೆ ಮಾಡಿಕೊಂಡ ತಾಯಿ-ಮಗ. ಐದು ವರ್ಷಗಳ ಹಿಂದೆ ಕೇರಳದಿಂದ ಮೊಹಮ್ಮದ್ ನಿಜಾಮ್ ಎಂಬುವರು ಪತ್ನಿ ಸುಮಿದಾ ನಾಜಿಮ್ ಹಾಗೂ ಮೂವರು ಗಂಡು ಮಕ್ಕಳೊಂದಿಗೆ ಬೆಂಗಳೂರಿಗೆ ಬಂದು ಮೇಡರಹಳ್ಳಿಯಲ್ಲಿ ಕಟ್ಟಡವೊಂದನ್ನು ಬಾಡಿಗೆಗೆ ಪಡೆದು ನೆಲಮಹಡಿಯಲ್ಲಿ ವಾಸವಿದ್ದು, ಮೊದಲ ಮಹಡಿಯಲ್ಲಿ ಪಿಜಿ ನಡೆಸುತ್ತಿದ್ದರು. ಕಳೆದ ಐದಾರು ತಿಂಗಳಿನಿಂದ ಪಿಜಿಯಲ್ಲಿ ನಷ್ಟ ಉಂಟಾದ ಪರಿಣಾಮ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ರಂಜಾನ್ ಹಬ್ಬದ ನಿಮಿತ್ತ ಮೊದಲ ಮಹಡಿಯಲ್ಲಿದ್ದ ಹುಡುಗರು ಊರಿಗೆ ತೆರಳಿದ್ದರಿಂದ ಕೆಲ ಕೊಠಡಿಗಳು ಖಾಲಿ ಇದ್ದವು. ರಾತ್ರಿ ಪತಿ ಮೊಹಮ್ಮದ್ ನಿಜಾಮ್ ಹಾಗೂ ಒಬ್ಬ ಮಗ ಕೆಳ ಮಹಡಿಯಲ್ಲಿ ಮಲಗಿದ್ದಾರೆ.

ಮಗ ಮೊಹಮ್ಮದ್ ನಾಜಿಮ್ ತಾಯಿ ಜತೆ ಮಲಗುವುದಾಗಿ  ಮೊದಲ ಮಹಡಿಗೆ ತೆರಳಿ ಖಾಲಿಯಿದ್ದ ಒಂದು ಕೊಠಡಿಯಲ್ಲಿ ಮಗ ಸೀರೆಯಿಂದ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರೆ, ಮತ್ತೊಂದು ಕೊಠಡಿಯಲ್ಲಿ ತಾಯಿಯೂ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗ್ಗೆಯಾದರೂ ಹೊರಗೆ ಬಾರದ ಪತ್ನಿ ಹಾಗೂ ಮಗನನ್ನು ನೋಡಲು ಮೊಹಮ್ಮದ್ ನಿಜಾಮ್ ಮಹಡಿಗೆ ತೆರಳಿದಾಗ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ  ಕೈಗೊಂಡಿದ್ದಾರೆ. (ವರದಿ ಬಿ.ಎಂ)

Leave a Reply

comments

Related Articles

error: