ಮೈಸೂರು

ಆಷಾಢ ಪ್ರಯುಕ್ತ ಚಾಮುಂಡಿ ಬೆಟ್ಟದ ಮೆಟ್ಟಿಲುಗಳಿಗೆ ಬಣ್ಣ ಬಳಿಯುವ ಕಾರ್ಯ

ಮೈಸೂರು,ಜೂ.28:-ಮೈಸೂರಿನ ಜನತೆಗೆ ಅತ್ಯಂತ ಪವಿತ್ರವಾದ ಮಾಸ ಆಷಾಢ. ವಿಶೇಷವಾಗಿ ಶ್ರೀ ಚಾಮುಂಡೇಶ್ವರಿ ದೇವಿಯ ಹಬ್ಬ, ತಾಯಿಯ ಜನ್ಮದಿನ, ಜಾತ್ರೆಗಳನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ದೇಶಾದ್ಯಂತ ಲಕ್ಷಾಂತರ ಭಕ್ತಾದಿಗಳು ತಾಯಿ ಚಾಮುಂಡೇಶ್ವರಿ ದೇವಿಯ ಬೆಟ್ಟವನ್ನು ಮೆಟ್ಟಿಲಿನ ಮೂಲಕ ಹತ್ತಿ ಸೇವೆ ಸಲ್ಲಿಸುತ್ತಾರೆ. ಈ ಪ್ರಯುಕ್ತ ಮೆಟ್ಟಲಿನ ಶುದ್ಧೀಕಾರ್ಯ ಹಾಗೂ ಸುಣ್ಣ ಬಣ್ಣ ಹಚ್ಚುವ ಕಾರ್ಯ ನಡೆಯಿತು.

ಬೆಟ್ಟವನ್ನು ಹತ್ತುವ ಹಾದಿ ಹಾಗೂ ಮಂಟಪಗಳು ಶಿಥಿಲಸ್ಥಿತಿ ಹಾಗೂ ಅಶುದ್ಧ ಸ್ಥಿತಿಯಲ್ಲಿದ್ದು. ಬೆಟ್ಟವನ್ನು ಹತ್ತುವ ಭಕ್ತರಿಗೆ ತೂಂದರೆಯಗುತ್ತದೆ. ಆದ್ದರಿಂದ ಇಂದಿನಿಂದ ಮೂರು ದಿನಗಳ ಕಾಲ ಹೆಚ್.ಜಿ ಗಿರಿಧರ್ ನೇತೃತ್ವದಲ್ಲಿ ಬೆಟ್ಟವನ್ನು ಹತ್ತುವ ಹಾದಿ ಹಾಗೂ ಮಂಟಪಗಳ ಶುದ್ಧಿಕಾರ್ಯ ಮತ್ತು ಸುಣ್ಣ ಬಣ್ಣ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೂಳ್ಳಲಾಗಿದೆ.ಬುಧವಾರ ಬಣ್ಣ ಬಳಿಯುವ ಕಾರ್ಯದಲ್ಲಿ ಎನ್.ಆರ್.ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹಾಗೂ ಬಿಜೆಪಿ ನಗರಾಧ್ಯಕ್ಷ ಡಾ.ಮಂಜುನಾಥ್, ದಕ್ಷಿಣ ಪ್ರಾಂತ ಸಂಘಚಾಲಕ ಮಾ.ವೆಂಕಟರಾಮ್, ಜಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಉಪಮೇಯರ್ ರತ್ನಲಕ್ಷ್ಮಣ್ ಮತ್ತಿತರರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

 

 

Leave a Reply

comments

Related Articles

error: