ಮೈಸೂರು

ಚಾಮುಂಡಿ ಬೆಟ್ಟ ಗ್ರಾಮ ಪಂಚಾಯತ್ ಅಧ್ಯಕ್ಷೆ ವಜಾಗೊಳಿಸಿ ಆದೇಶ

ಮೈಸೂರು.ಜೂ.28:-ಚಾಮುಂಡಿ ಬೆಟ್ಟ ಗ್ರಾಮ ಪಂಚಾಯತ್  ಅಧ್ಯಕ್ಷೆಯನ್ನು ಅಧ್ಯಕ್ಷ ಸ್ಥಾನದಿಂದ  ವಜಾಗೊಳಿಸಿ ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿದೆ.

ಎಸ್.ಗೀತಾ  ಎಂಬವರೇ ಅಧ್ಯಕ್ಷ ಸ್ಥಾನದಿಂದ ವಜಾಗೊಂಡವರಾಗಿದ್ದಾರೆ. ಗಣೇಶ್ ಎಂಬ ಪೌರಕಾರ್ಮಿಕನನ್ನು ಜೂ.7ರಂದು  ಒತ್ತಾಯಪೂರ್ವಕವಾಗಿ ಮ್ಯಾನ್ ಹೋಲ್ ಗೆ ಇಳಿಸಿದ್ದರು. ಈ ಕುರಿತು ಭಾರೀ ಈ ಚರ್ಚೆಯಾಗಿತ್ತು. ಪ್ರಕರಣ ಕುರಿತಂತೆ ಪಿಡಿಓ ಆನಂದನನ್ನು ಬಂಧಿಸಲಾಗಿದೆ. ಇದೀಗ  ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ  ಶಿವಶಂಕರ್  ಅಧ್ಯಕ್ಷೆಯನ್ನು ವಜಾ ಮಾಡುವಂತೆ ಪಂಚಾಯತ್ ರಾಜ್ ಇಲಾಖೆಗೆ ಪತ್ರ ಬರೆದಿದ್ದರು. ಇದೀಗ ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: