ಕರ್ನಾಟಕಪ್ರಮುಖ ಸುದ್ದಿಮೈಸೂರು

ಮನಸೂರೆಗೊಂಡ ದಸರಾ ಸ್ತಬ್ಧಚಿತ್ರಗಳು: ಮೈಸೂರು ಜಿಲ್ಲಾ ಪಂಚಾಯತ್ ಸ್ತಬ್ಧಚಿತ್ರಕ್ಕೆ ಪ್ರಥಮ ಸ್ಥಾನ

ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಮೈಸೂರು ಜಿಲ್ಲಾ ಪಂಚಾಯತ್ ನಿರ್ಮಿಸಿದ್ದ “ಮೈಸೂರಿಗೆ ಮಹಾರಾಣಿಯರ ಕೊಡುಗೆ” ಸ್ತಬ್ಧ ಚಿತ್ರಕ್ಕೆ ಪ್ರಥಮ ಸ್ಥಾನ ಲಭಿಸಿದೆ. ಒಟ್ಟು ನಲ್ವತ್ತೆರಡು ಸ್ತಬ್ಧ ಚಿತ್ರಗಳು ಹಾಗೂ ಐವತ್ತಕ್ಕೂ ಹೆಚ್ಚು ಜಾನಪದ ಕಲಾ ತಂಡಗಳು ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದವು.

second

ಇತಿಹಾಸದ ವೈಭವಕ್ಕೆ ಮೆರುಗು ನೀಡಿದ್ದ ಮೈಸೂರು ಸಂಸ್ಥಾನದ ಮಹಾರಾಜ ಜಯಚಾರಾಜ ಒಡೆಯರ್ ಮಹಾರಾಣಿ ಸತ್ಯಪ್ರೇಮ ಕುಮಾರಿ ದೇವಿ ಹಾಗೂ ಇತರೆ ರಾಜ ದಂಪತಿಗಳ ತೀರಾ ಅಪರೂಪವೆನಿಸುವಂತಹ ಚಿತ್ರಗಳು. ಮಹಾರಾಣಿಯರು ನಿರ್ಮಿಸಿದ ಮಾರಿಕಣಿವೆ ಅಣೆಕಟ್ಟೆ, ಶಿವನಸಮುದ್ರ ಜಲವಿದ್ಯುತ್ ಉತ್ಪಾದನಾ ಕೇಂದ್ರ, ಪಿ.ಕೆ. ಸ್ಯಾನಿಟೋರಿಯಂ, ದೇವಾಂಬುಧಿ ಕೆರೆ ಸೇರಿದಂತೆ ನಾಡುನುಡಿಗಾಗಿ ಮಹಾರಾಣಿಯರ ಕೊಡುಗೆಗಳನ್ನು ಸ್ತಬ್ಧಚಿತ್ರಗಳು ಬಿಂಬಿಸುತ್ತಿದ್ದವು.

20161011_165701

ದಕ್ಷಿಣ ಕನ್ನಡ ಜಿಲ್ಲೆ ರಾಣಿ ಅಬ್ಬಕ್ಕ, ಚನ್ನವೀರಕಣವಿಯವರೊಂದಿಗೆ ಧಾರವಾಡದ ಹಲವು ಸಾಹಿತಿ ಹಾಗೂ ಜ್ಞಾನಪೀಠ ಪುರಸ್ಕೃತ ಗಿರೀಶ್ ಕಾರ್ನಾಡ್, ದ.ರಾ. ಬೇಂದ್ರೆ ಸೇರಿದಂತೆ ಕನ್ನಡದ ಹಿರಿಯ ಸಾಹಿತಿಗಳನ್ನು ಧಾರವಾಡದ ಜಿ.ಪಂ., ರಾಮನಗರ ಜಿ.ಪಂ ನಿರ್ಮಿಸಿದ್ದ ಮಕ್ಕಳಿಗೆ ಪ್ರಿಯವಾದ ಚನ್ನಪಟ್ಟಣದ ಮರದ ಬೊಂಬೆಯ ಸ್ತಬ್ಧ ಚಿತ್ರಕ್ಕೆ ಪುಟಾಣಿಗಳು ಚಪ್ಪಾಳೆ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ನಲಿ-ಕಲಿ, ಕಾರ್ಮಿಕ ಇಲಾಖೆಯ ಬಾಲಕಾರ್ಮಿಕ ವಿರೋಧಿ ಹಾಗೂ ಐತಿಹಾಸಿಕ ಪರಂಪರೆಯ ವಿಜಯನಗರ ಸಾಮ್ರಾಜ್ಯದ ಹಂಪಿಯ ಉಗ್ರನರಸಿಂಹ, ಕಲ್ಲಿನ ರಥ, ಹಾಗೂ ಕಮಲ ಮಹಲ್ , ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ನೂರೈವತ್ತು ವರ್ಷ ಪೂರೈಸಿದ ಬೆಂಗಳೂರಿನ ಕೇಂದ್ರ ಗ್ರಂಥಾಲಯ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನದ ಕರಡು ಪ್ರತಿಯನ್ನು ರಾಷ್ಟ್ರಪತಿಗಳಿಗೆ ಒಪ್ಪಿಸಿದ ಸಮಯದ ಭಾವಚಿತ್ರ ಸೇರಿದಂತೆ ರಾಜಕೀಯದ ವಿಶೇಷ ಕ್ಷಣಗಳನ್ನು ಬಿಂಬಿಸಿದ ಸ್ತಬ್ಧಚಿತ್ರ ಮತ್ತು ಮೂವತ್ತು ಜಿಲ್ಲೆಗಳ ಹಾಗೂ ಕೆಲವು ಸರ್ಕಾರಿ ಇಲಾಖೆಗಳ ಸ್ತಬ್ಧ ಚಿತ್ರಗಳು ನಯನ ಮನೋಹರವಾಗಿದ್ದವು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕೋಟೆಯ ಸ್ತಬ್ಧಚಿತ್ರವಿದ್ದ ವಾಹನವು ಮೆರವಣಿಗೆಯ ಸಮಯದಲ್ಲಿ ಕೆಟ್ಟಿತ್ತು. ಅದನ್ನು ಇತರೆ ವಾಹನದ ನೆರವಿನೊಂದಿಗೆ ಎಳೆದೊಯ್ಯದಿದ್ದು ಕಂಡು ಬಂತು.

20161011_165806

ಕಳೆದ (ಅ.1) ಹನ್ನೊಂದು ದಿನಗಳ ಕಾಲ ನಡೆದ ಐತಿಹಾಸಿಕ ಪರಂಪರೆಯ, ನಾಡು ನುಡಿ ಅನಾವರಣಗೊಳಿಸಿದ ನಾಡ ಹಬ್ಬ ಮೈಸೂರು ದಸರಾಗೆ ವೈಭವಯುತ ತೆರೆ ಬಿದಿದ್ದೆ.  ಜಂಬೂಸವಾರಿಗೆ ಜೊತೆಯಾದ ಜಾನಪದ ಕಲಾತಂಡಗಳು ಹಾಗೂ ಸ್ತಬ್ಧ ಚಿತ್ರಗಳು ಆಕರ್ಷಣೀಯ ಮೆರುಗು ನೀಡಿದ್ದವು.

third

20161011_170310

Leave a Reply

comments

Related Articles

error: