ಕರ್ನಾಟಕಪ್ರಮುಖ ಸುದ್ದಿ

ಪತ್ರಕರ್ತರಿಗೆ ನೀಡಲಾದ ಜೈಲು ಶಿಕ್ಷೆ, ದಂಡವನ್ನು ವಾಪಸ್ ಪಡೆಯಿರಿ : ಹೊರಟ್ಟಿ

ಬೆಂಗಳೂರು, ಜೂ.27 : ಪತ್ರಕರ್ತರಿಗೆ ನೀಡಲಾಗಿರುವ ಶಿಕ್ಷೆ ಹಾಗೂ ದಂಡವನ್ನು ವಾಪಸ್ ಪಡೆಯಬೇಕು ಎಂದು ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರನ್ನು ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರು ಒತ್ತಾಯಿಸಿದ್ದಾರೆ.

ಪತ್ರಕರ್ತರಾದ ರವಿ ಬೆಳಗೆರೆ ಹಾಗೂ ಅನಿಲ್‍ರಾಜು ಅವರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿರುವುದನ್ನು ಹಿಂದಕ್ಕೆ ಪಡೆಯುವ ಸಂಬಂಧ ಹೊರಟ್ಟಿಯವರು, ವಿಧಾನಸಭಾಧ್ಯಕ್ಷರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಆಡಳಿತ ಮತ್ತು ಪ್ರತಿಪಕ್ಷದ ಪ್ರಮುಖ ಮುಖಂಡರೊಡನೆ ಚರ್ಚೆ ಮಾಡಿ ಸಾಧಕಬಾಧಕಗಳ ಚರ್ಚೆ ಮಾಡಿ ತೀರ್ಮಾನಕ್ಕೆ ಬರುವುದು ವಾಡಿಕೆ. ಆದರೆ ಕಠಿಣ ಶಿಕ್ಷೆ ವಿಧಿಸಿರುವುದು ಒಳ್ಳೆಯದಲ್ಲ. ಇದರಿಂದ ಮಾಧ್ಯಮಗಳನ್ನು ನಿಯಂತ್ರಿಸುವುದು, ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವುದು ವೈಯಕ್ತಿಕವಾಗಿ ಸರಿಯಾದ ಕ್ರಮವಲ್ಲ ಎನಿಸುತ್ತದೆ. ಈಗಾಗಲೇ ಶಿಕ್ಷೆ ನೀಡಿರುವುದಕ್ಕೆ ಎಲ್ಲ ಮಾಧ್ಯಮ ಒಕ್ಕೂಟಗಳು ವಿರೋಧ ವ್ಯಕ್ತಪಡಿಸಿವೆ ಎಂದು ಪತ್ರದಲ್ಲಿ ಹೊರಟ್ಟಿ ಹೇಳಿದ್ದಾರೆ.

ವಿಧಾನಸಭೆ ಸಮಿತಿಗೆ, ಸದನಕ್ಕೆ ಹಾಗೂ ಹಕ್ಕುಚ್ಯುತಿ ಬಾಧ್ಯತಾ ಸಮಿತಿಗೆ ಅಗೌರವ ತೋರಿಸುವುದು ಸರಿಯಲ್ಲ. ಮುಂದೆ ಅಗೌರವ ತೋರದಂತೆ ಸೂಕ್ಷ್ಮವಾಗಿ ಪತ್ರಕರ್ತರಿಗೆ ತಿಳಿಸಬೇಕಾಗುತ್ತದೆ. ಶಾಸಕಾಂಗ ಮತ್ತು ಮಾಧ್ಯಮದ ನಡುವೆ ಮಧುರವಾದ ಸಂಬಂಧ ಬೆಳೆಸಲು ಸಭಾಧ್ಯಕ್ಷರು ಮತ್ತು ಮುಖ್ಯಮಂತ್ರಿಗಳು ಪ್ರೇರಣೆಯಾಗಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

-ಎನ್.ಬಿ.

Leave a Reply

comments

Related Articles

error: