ಕರ್ನಾಟಕ

ಪ್ರವಾಸಕ್ಕೆಂದು ಬಂದಿದ್ದ ಇಬ್ಬರು ಸಮುದ್ರಪಾಲು

ರಾಜ್ಯ,( ಮಂಗಳೂರು) ಜೂ.28:  ಪ್ರವಾಸಕ್ಕೆಂದು ಬಂದಿದ್ದ ಇಬ್ಬರು ಸಮುದ್ರಪಾಲಾಗಿರುವ ಘಟನೆ ಉಳ್ಳಾಲದ ಮೊಗವೀರ ಪಟ್ಣ ಸಮುದ್ರ ಕಿನಾರೆಯಲ್ಲಿ ನಡೆದಿದೆ.

ಮೃತರನ್ನು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಶಾರೂಖ್ (19) ಮತ್ತು ಹಯಾಝ್ ಯಾನೆ ಚೋಟು(19)  ಎಂದು ಗುರುತಿಸಲಾಗಿದೆ.  ಇಂದು ಬೆಳಿಗ್ಗೆ ಮೊಗವೀರ ಪಟ್ಣದ ಬೀಚ್ ನಲ್ಲಿ ಸ್ನಾನಗೈಯುವಾಗ ದುರ್ಘಟನೆ ಈ ದುರ್ಘಟನೆ ಸಂಭವಿಸಿದೆ. ಉಳ್ಳಾಲ ದರ್ಗಾಕ್ಕೆಂದು ಆಗಮಿಸಿದ್ದ  ಹತ್ತು ಜನ ಸಂಬಂಧಿಕರೊಂದಿಗೆ ಇವರು ಸಹ ಆಗಮಿಸಿದ್ದರು ಎಂದು ತಿಳಿದು ಬಂದಿದೆ.

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ: ಎಸ್.ಎನ್, ಎಲ್.ಜಿ)

 

Leave a Reply

comments

Related Articles

error: