ಮೈಸೂರು

ಖಾಸಗಿ ಕಂಪನಿಯವರಿಗಾಗಿ ರಸ್ತೆ ನಿರ್ಮಾಣ ಆರೋಪ; ಪ್ರತಿಭಟನೆ

ಎಚ್.ಡಿ.ಕೋಟೆ,ಜೂ.28- ನೀರಾವರಿ ಇಲಾಖೆ ಹಣದಲ್ಲೇ ಖಾಸಗಿ ಕಂಪನಿಯವರಿಗಾಗಿ ರಸ್ತೆ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿ ಸಿಂಹ ಘರ್ಜನೆ ಸಂಘದವರು ಕಬಿನಿ ಜಲಾಶಯದ ಮುಂಭಾಗ ಪ್ರತಿಭಟನೆ ನಡೆಸಿದರು.

ಅಕ್ರಮ ನಡೆಸುತ್ತಿರುವ ಅಧಿಕಾರಿಯಾದ ಕಬಿನಿ ಕಾರ್ಯಪಾಲಕ ಅಭಿಯಂತರ ಅವರನ್ನು ಕೆಲಸದಿಂದ ವಜಾಗೊಳಿಸಬೇಕು. ಈ ಕೂಡಲೇ ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿದರು. ಇಲ್ಲವಾದರೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: