
ಕರ್ನಾಟಕಪ್ರಮುಖ ಸುದ್ದಿ
ದರ ಏರಿಕೆಯಿಂದ ಕೈಗೆಟುಕದ ಕರಾವಳಿಯ ಮೀನು : ಮಾಂಸಪ್ರಿಯರಿಗೆ ನಿರಾಸೆ
ಮಂಗಳೂರು, ಜೂ.28 : ಕರಾವಳಿ ಪ್ರದೇಶದಲ್ಲಿ ಮೀನುಗಳ ದರ ಕಡಿಮೆ ಇರುವುದು ಸಾಮಾನ್ಯ. ಆದರೆ ಮತ್ಸ್ಯೋದ್ಯಮಕ್ಕೆ ಹೆಸರುವಾಸಿಯಾಗಿರುವ ಕರಾವಳಿಯಲ್ಲಿ ಮೀನುಗಳ ದರ ಆಕಾಶದೆತ್ತರಕ್ಕೆ ಜಿಗಿದೆ. ಹೀಗಾಗಿ ಮಾಂಸಾಹಾರರ ಪ್ರಿಯರಿಗೆ ಸ್ವಲ್ಪ ನಿರಾಸೆಯಾಗಿದೆ.
ಮೀನುಗಾರಿಕೆಗೆ ಸ್ಥಗಿತಗೊಂಡಿರುವುದರಿಂದ ಪೂರೈಕೆ ನಿಂತಿದೆ. ಕೇರಳ, ತಮಿಳುನಾಡು ಮತ್ತು ಆಂಧ್ರ ಕರಾವಳಿಯಿಂದ ಮೀನುಗಳು ಬರಬೇಕಿದ್ದು, ಸಹಜವಾಗಿ ಅಲ್ಲಿಂದ ತರುವ ಮೀನುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಈ ವರ್ಷದ ಆರಂಭದಿಂದಲೇ ಮೀನು ದರ ಏರುಗತಿಯಲ್ಲಿ ಸಾಗಿತ್ತು. ಇದರ ಮಧ್ಯೆ ಜೂನ್ 1 ರಿಂದ ಮೀನುಗಾರಿಕೆಗೆ 61 ದಿನಗಳ ನಿಷೇಧ ಹೇರಿರುವುದರಿಂದ ಮತ್ತಷ್ಟು ದರ ಏರಿಕೆಯಾಗಿದೆ. ಈ ನಿಷೇಧ ಆಗಸ್ಟ್ ಮೊದಲ ವಾರದವರೆಗೆ ಇದ್ದು, ಅಲ್ಲೀವರೆಗೆ ದರ ಕಡಿಮೆಯಾಗುವ ಲಕ್ಷಣವಿಲ್ಲ.
-ಎನ್.ಬಿ.