ದೇಶಪ್ರಮುಖ ಸುದ್ದಿ

ಹಿಂದೂ ಮಹಾ ಸಾಗರಕ್ಕೆ ಚೀನಾದ ಅತ್ಯಾಧುನಿಕ ‘ನೌಕಾವಿನಾಶಕ’ ಸಮರನೌಕೆ

ಬೀಜಿಂಗ್, ಜೂ.28 : ಚೀನಾ ನೌಕಾಸೇನೆಗೆ ನೌಕಾವಿನಾಶಕ ಬೃಹತ್ ಸಮರನೌಕೆಯನ್ನು ಸೇರ್ಪಡೆಗೊಳಿಸಲಾಗಿದ್ದು, ಚೀನಿ ಸೇನೆ ಮತ್ತಷ್ಟು ಬಲಯುತವಾಗಿದೆ. 10 ಸಾವಿರ ಟನ್ ಸಾಮರ್ಥ್ಯದ ಹೊಸ ತಲೆಮಾರಿನ ‘ನೌಕಾ ವಿನಾಶಕ’ ಸಮರ ನೌಕೆ’ಯನ್ನು ಚೀನಾದಲ್ಲೇ ದೇಶೀಯವಾಗಿ ವಿನ್ಯಾಸಗೊಳಿಸಿ ನಿರ್ಮಿಸಲಾಗಿದೆ. ಈ ಸಮರ ನೌಕೆಯನ್ನು ಶಾಂಘೈನಲ್ಲಿನ ಜಿಯಾಂಗ್ ಹಡಗು ನಿರ್ಮಾಣ ಕೇಂದ್ರದಲ್ಲಿ ಇಂದು ಚೀನಾ ಸೇನೆಗೆ ಸಮರ್ಪಿಸಲಾಯಿತು.

ದೇಶೀಯವಾಗಿ ನಿರ್ಮಿಸಿರುವ ಈ ನೌಕೆಯು ಮೊತ್ತ ಮೊದಲ ಹೊಸ ತಲೆಮಾರಿನ ನೌಕಾವಿನಾಶಕ ಸಮರನೌಕೆಯಾಗಿದೆ. ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆ, ಕ್ಷಿಪಣಿ ವಿರೋಧಿ ವ್ಯವಸ್ಥೆ ಹಾಗೂ ನೌಕೆ ಮತ್ತು ಜಲಾಂತರ್ಗಾಮಿಯನ್ನು ಹೊಡೆದು ಹಾಕುವ ಸಾಮರ್ಥ್ಯ ಈ ನೌಕೆಗಿದೆ ಎಂದು ಚೀನಾದ ಸರಕಾರಿ ಒಡೆತನದ ಸುದ್ದಿ ಸಂಸ್ಥೆ ಕ್ಸಿನ್’ಹುವಾ ವರದಿ ಮಾಡಿದೆ. ಈ ಬೃಹತ್ ನೌಕೆಯನ್ನು ಅಮೆರಿಕ ಮತ್ತು ಭಾರತದ ನೌಕಾ ಶಕ್ತಿಗೆ ಸೆಡ್ಡು ಹೊಡೆಯು ಸಲುವಾಗಿ ಚೀನಾ ಹಿಂದೂ ಮಹಾಸಾಗರದಲ್ಲಿ ನಿಯೋಜಿಸಲಿದೆ ಎಂದು ರಕ್ಷಣಾ ಮೂಲಗಳಿಂದ ತಿಳಿದುಬಂದಿದೆ.

-ಎನ್.ಬಿ.

Leave a Reply

comments

Related Articles

error: