ಕರ್ನಾಟಕ

ಗ್ರಾ.ಪಂ ಗೆ ಸೇರಿದ ದಾಖಲೆಗಳು ಬೆಂಕಿಗಾಹುತಿ : ಅಕ್ರಮದ ಶಂಕೆ ವ್ಯಕ್ತ

ರಾಜ್ಯ(ಮಂಡ್ಯ)ಜೂ.28;- ತೋಟದ ಜಮೀನಲ್ಲಿ ಗ್ರಾ.ಪಂ. ಗೆ ಸೇರಿದ ಹಲವು ದಾಖಲೆಗಳು ಮತ್ತು ಅರ್ಜಿಗೆ ಬೆಂಕಿ ಗಾಹುತಿಯಾಗಿದ್ದು, ಅಕ್ರಮದ ಅನುಮಾನ ವ್ಯಕ್ತವಾಗಿದೆ.
ಮದ್ದೂರು ತಾಲೂಕಿನ ಕೆಸ್ತೂರು ಗ್ರಾ.ಪಂಚಾಯತಿಗೆ ಸೇರಿದ ದಾಖಲೆ ಮತ್ತು ಅರ್ಜಿಗಳು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ. ಪಂಚಾಯತಿಗೆ ಸೇರಿದ ವಿವಿಧ ಯೋಜನೆಗಳ ದಾಖಲೆ ಮತ್ತು ಅರ್ಜಿಗಳನ್ನು  ಬೆಂಕಿ ಹಾಕಿ ಸುಟ್ಟು ಸಾಕ್ಷಿ ನಾಶಕ್ಕೆ ಯತ್ನ ನಡೆಸಲಾಗಿದೆಯೇನೋ ಎಂಬ ಶಂಕೆ ವ್ಯಕ್ತವಾಗಿದೆ.
ಕಸ ವಿಲೇವಾರಿ ಮಾಡುವ ನೆಪದಲ್ಲಿ ಪಂಚಾಯತ್ ನಿಂದ ದಾಖಲೆಗಳು ಮತ್ತು ಅರ್ಜಿಗಳನ್ನು ಹೊತ್ತೊಯ್ದು  ದೂರದ ಜಮೀನಲ್ಲಿ ಬೆಂಕಿ ಹಾಕಲಾಗಿದೆ ಎಂಬ ಮಾತು ಕೇಳಿ ಬಂದಿದೆ. ಪಂಚಾಯತ್ ನ14 ನೇ ಹಣಕಾಸು ಯೋಜನೆಗೆ ನರೇಗಾ, ವಸತಿ ಯೋಜನೆ, ಗ್ರಾ.ಪಂ. ತೆರಿಗೆ ವಸೂಲಾತಿ, ನೀರಿನ ಅನುದಾನ, ಮತ್ತು ಕೇಂದ್ರ ಮತ್ತು ರಾಜ್ಯದ ಅನುದಾನದಲ್ಲಿ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬರುತ್ತಿದೆ. ಸಾಕ್ಷ್ಯ ನಾಶಪಡಿಸಲು ದಾಖಲೆಗಳಿಗೆ ಬೆಂಕಿ ಹಚ್ಚಿ ಕೃತ್ಯ ಎಸಗಿದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: