ಕರ್ನಾಟಕಮೈಸೂರು

ಕಾವೇರಿ ತೀರ್ಪು ರಾಜ್ಯದ ಪರವಾಗಿಯೇ ಬರಲಿದೆ: ಸಿಎಂ ವಿಶ್ವಾಸ

ಅಕ್ಟೋಬರ್ 18 ರಂದು ಕಾವೇರಿ ವಿವಾದ ಕುರಿತು ತೀರ್ಪು ಹೊರಬೀಳಲಿದ್ದು, ತೀರ್ಪು ರಾಜ್ಯದ ಪರವಾಗಿಯೇ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ಮೈಸೂರು ಮತ್ತು ವರುಣಾ ಕ್ಷೇತ್ರದ ಜನರ ಅಹವಾಲನ್ನು ಸ್ವೀಕರಿಸಿದರು. ಈ ಸಂದರ್ಭ ಮಾತನಾಡಿದ ಸಿಎಂ ಕಳೆದ ಮೂರು ದಿನಗಳಿಂದ ದಸರಾ ಉತ್ಸವ ಪ್ರಯುಕ್ತ ನಾನು ಮೈಸೂರಿನಲ್ಲಿಯೇ ಇದ್ದೇನೆ. ಈ ಬಾರಿ ಹಿಂಗಾರು ಒಳ್ಳೆಯ ಮುನ್ಸೂಚನೆಯನ್ನು ನೀಡಿದೆ. ತಾಯಿ ಚಾಮುಂಡೇಶ್ವರಿಯಲ್ಲಿಯೂ ಉತ್ತಮ ಮಳೆಯಾಗಲಿ, ರೈತರ ಸಂಕಷ್ಟ ಪರಿಹಾರಗೊಳ್ಳಲಿ ಎಂದೇ ಬೇಡಿಕೊಂಡಿದ್ದೇನೆ. ಅಕ್ಟೋಬರ್ 18ರಂದು ಕಾವೇರಿ ವಿವಾದ ಕುರಿತು ತೀರ್ಪು ಹೊರಬೀಳಲಿದೆ. ಜನತೆ ಧೃತಿಗೆಡಬೇಡಿ. ನಿಮ್ಮೊಂದಿಗೆ ನಾವಿದ್ದೇವೆ. ತೀರ್ಪು ನಮ್ಮ ಪರವಾಗಿಯೇ ಬರಲಿದೆ ಎಂದರು.

ಅಕ್ಟೋಬರ್ 19 ರಂದು ಮಹದಾಯಿ ಕುರಿತಂತೆ ಸರ್ವಪಕ್ಷಗಳ ಸಭೆ ಕರೆಯಲಾಗುವುದು ಮತ್ತು ಮಹದಾಯಿಗೆ ಸಂಬಂಧಿಸಿದವರನ್ನು ಭೇಟಿಯಾಗಿ ಮಾಹಿತಿ ಸಂಗ್ರಹಿಸಲಾಗುವುದು ಎಂದು ತಿಳಿಸಿದರು.

ಅಂಧನ ಮನವಿಗೆ ಸ್ಥಳದಲ್ಲೇ ಸ್ಪಂದನೆ:

ಅಹವಾಲು ಸ್ವೀಕರಿಸುವ ವೇಳೆ ಎರಡೂ ಕಣ್ಣುಗಳನ್ನು ಕಳೆದುಕೊಂಡಿರುವ ವ್ಯಕ್ತಿಯೋರ್ವರು ಸಿಎಂ ಬಳಿ ಬಂದು ನನಗೆ ಜೀವನ ನಿರ್ವಹಣೆಗೆ ಕಷ್ಟವಾಗುತ್ತಿದೆ. ಎರಡೂ ಕಣ್ಣುಗಳು ಕಾಣಿಸುತ್ತಿಲ್ಲ. ಸರ್ಕಾರದಿಂದ ನನಗೆ ಯಾವ ಸೌಲಭ್ಯವೂ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಅವರ ಬಳಿ ಅರ್ಜಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿಗಳು ಅಲ್ಲಿಯೇ ತಮ್ಮ ರುಜುವನ್ನು ಹಾಕಿ ಇದನ್ನು ಅಂಗವಿಕಲರ ಇಲಾಖೆಗೆ ನೀಡಿ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಸೂಚನೆ ನೀಡಿದರು.

ಈ ಸಂದರ್ಭ ಕಾಂಗ್ರೆಸ್ ನ ಕೆಲವು ಮುಖಂಡರು ಸಿಎಂ ಜೊತೆಗಿದ್ದರು.

Leave a Reply

comments

Related Articles

error: