ದೇಶಪ್ರಮುಖ ಸುದ್ದಿ

ರಜನೀಕಾಂತ್ ರಾಜಕೀಯ ಸೇರಲು ಮನೆಯವರಿಂದಲೇ ವಿರೋಧ!

ಪ್ರಮುಖ ಸುದ್ದಿ, ಚೆನ್ನೈ, ಜೂ.28: ಸೆಪ್ಟೆಂಬರ್ ನಲ್ಲಿ ತಮ್ಮ ರಾಜಕೀಯ ಸೇರ್ಪಡೆ ಬಗ್ಗೆ ಉತ್ತರಿಸುವುದಾಗಿ ಹೇಳಿಕೊಂಡಿರುವ ಸೂಪರ್ ಸ್ಟಾರ್ ರಜನೀಕಾಂತ್ ಗೆ ಮನೆಯವರಿಂದಲೇ ವಿರೋಧವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ರಜನಿ ರಾಜಕೀಯ ಸೇರುವುದು ಅವರ ಕುಟುಂಬದವರಿಗೆ ಇಷ್ಟವಿಲ್ಲವಂತೆ. ಅಮಿತಾಭ್ ಬಚ್ಚನ್ ಕೂಡಾ ಒಮ್ಮೆ ರಾಜಕೀಯ ಸೇರುತ್ತೇನೆಂದು ಹೋಗಿ ಕೈಸುಟ್ಟುಕೊಂಡಿದ್ದರು. ಅದೇ ರೀತಿ ರಜನಿಗೂ ಆದರೆ ಎಂಬ ಭಯ ಕುಟುಂಬದವರದ್ದು ಎನ್ನಲಾಗಿದೆ.

ಇದೇ ಕಾರಣಕ್ಕೆ ರಜನೀಕಾಂತ್ ಇದೀಗ ಬಿಗ್ ಬಿ ಅಮಿತಾಭ್ ಬಚ್ಚನ್ ರನ್ನು ಭೇಟಿಯಾಗಿ ಸಲಹೆ ಕೇಳಲಿದ್ದಾರೆ ಎನ್ನಲಾಗಿದೆ. ಬಚ್ಚನ್ ಸೇರಿದಂತೆ ತಮ್ಮ ವಿಶ್ವಾಸಾರ್ಹ ಗೆಳೆಯರನ್ನು ಭೇಟಿಯಾಗಿ ಚರ್ಚಿಸಿದ ಬಳಿಕವೇ ರಾಜಕೀಯ ಸೇರುವುದೋ ಬೇಡವೋ ಎಂಬುದನ್ನು ನಿರ್ಧರಿಸಲಿದ್ದಾರೆ ಎಂದು ತಿಳಿದು ಬಂದಿದೆ. (ವರದಿ: ಎಲ್.ಜಿ)

Leave a Reply

comments

Related Articles

error: