ಪ್ರಮುಖ ಸುದ್ದಿ

ಮುಂಬೈ ಸರಣಿ ಬಾಂಬ್ ಸ್ಫೋಟದ ರೂವಾರಿ ಮುಸ್ತಫಾ ದೊಸ್ಸಾ ನಿಧನ

ಪ್ರಮುಖ ಸುದ್ದಿ, ಮುಂಬೈ, ಜೂ.೨೮: ೧೯೯೩ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿ ೨೫೭ ಜನರ ಸಾವಿಗೆ ಕಾರಣನಾಗಿದ್ದ ಮುಸ್ತಫಾ ದೊಸ್ಸಾ ಬುಧವಾರ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಎದೆನೋವಿನಿಂದ ಬಳಲುತ್ತಿದ್ದ ಮುಸ್ತಫಾನನ್ನು ಮಂಗಳವಾರ ಸಂಜೆ ಮುಂಬೈನ ಜೆಜೆ ಆಸ್ಪತ್ರೆಯಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ಇಂದು ಸಾವನ್ನಪ್ಪಿದ್ದಾನೆ. ೧೯೯೩ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ೨೫೭ ಜನ ಮೃತಪಟ್ಟಿದ್ದರು. ಘಟನೆಯಲ್ಲಿ ೭೧೩ ಜನರು ಗಂಭೀರವಾಗಿ ಗಾಯಗೊಂಡಿದ್ದರು. ಸ್ಫೋಟದಿಂದ ೨೭ ಕೋಟಿ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿತ್ತು. ಪ್ರಕರಣ ವಿಚಾರಣೆ ನಡೆಸಿದ ಮುಂಬೈನ ವಿಶೇಷ ಟಾಡಾ ನ್ಯಾಯಾಲಯ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮುಸ್ತಫಾ ದೊಸ್ಸಾ, ಅಬು ಸಲೇಂ ಸೇರಿದಂತೆ ಆರು ಜನ ತಪ್ಪಿತಸ್ಥರು ಎಂದು ಇತ್ತೀಚೆಗೆ ತೀರ್ಪು ನೀಡಿತ್ತು. (ವರದಿ ಬಿ.ಎಂ)

Leave a Reply

comments

Related Articles

error: