ಕರ್ನಾಟಕಪ್ರಮುಖ ಸುದ್ದಿ

ಉಪ ನೋಂದಣಾಧಿಕಾರಿ ಹುದ್ದೆ : ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಬೆಂಗಳೂರು, ಜೂ. 27 : ಕರ್ನಾಟಕ ಲೋಕಸೇವಾ ಆಯೋಗವು ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿನ ಉಪ ನೋಂದಣಾಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಆಯೋಗದ ವೆಬ್‍ಸೈಟ್ : http://kpsc.kar.nic.in Elegibility list ನಲ್ಲಿ ಪ್ರಕಟಿಸಿದೆ. ಮೂಲ ದಾಖಲೆಗಳ ಪರಿಶೀಲನೆಯ ದಿನಾಂಕ ಮತ್ತು ಸಮಯ, ಇತ್ಯಾದಿ ಅಗತ್ಯ ಮಾಹಿತಿಗಳನ್ನು ನಂತರದಲ್ಲಿ ತಿಳಿಸಲಾಗುವುದು ಎಂದು ಕರ್ನಾಟಕ ಲೋಕಸೇವಾ ಆಯೋಗದ ಪ್ರಕಟಣೆ ತಿಳಿಸಿದೆ.

-ಎನ್.ಬಿ.

Leave a Reply

comments

Related Articles

error: