ಮೈಸೂರು

ಕ್ಯಾನ್ಸರ್ ತಪಾಸಣೆ ಮತ್ತು ಜಾಗೃತಿಗಾಗಿ ಉಚಿತ ಶಿಬಿರ

ಮೈಸೂರಿನ ಕುವೆಂಪು ನಗರದ ಪ್ರಮತಿ ಹಿಲ್ ವ್ಯೂ ಅಕಾಡಮಿಯಲ್ಲಿ ಎಚ್.ವಿ.ರಾಜೀವ ಸ್ನೇಹ ಬಳಗ, ಮಾರವಾಡಿ ಯುವ ಮಂಚ್  ವತಿಯಿಂದ ಬುಧವಾರ ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ಜಾಗೃತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಶಿಬಿರದಲ್ಲಿ ಪಾಲ್ಗೊಂಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎಚ್.ವಿ.ರಾಜೀವ್ ಅವರು ಮಾತನಾಡಿ ಕ್ಯಾನ್ಸರ್ ರೋಗಿಗಳು ಭಯ ಬೀಳದೆ ಸರಿಯಾದ ಚಿಕಿತ್ಸೆಯನ್ನು ಪಡೆದರೆ ರೋಗವನ್ನು ನಿಯಂತ್ರಣದಲ್ಲಿಡಲು ಸಾಧ್ಯ. ಶಿಬಿರದಲ್ಲಿ ಪಾಲ್ಗೊಂಡಿರುವವರಲ್ಲಿ ಕ್ಯಾನ್ಸರ್ ಯಾರಿಗಿದೆಯೋ ಅವರನ್ನು ನಾವು ಉಚಿತವಾಗಿ ತಪಾಸಣೆಗೊಳಪಡಿಸಿ, ಚಿಕಿತ್ಸೆ ನೀಡಲಿದ್ದೇವೆ ಎಂದು ತಿಳಿಸಿದರು.

ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಕುವೆಂಪು ನಗರದ ಸುತ್ತಮುತ್ತ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು “ಆರೋಗ್ಯವೇ ಭಾಗ್ಯ, ಆರೋಗ್ಯವೇ ಸಂಪತ್ತು, ಧೂಮಪಾನ ಆರೋಗ್ಯಕ್ಕೆ ಹಾನಿಕರ” ಎನ್ನುವ ಫಲಕಗಳನ್ನು ಹಿಡಿದು ಜಾಥಾ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಕ್ಯಾನ್ಸರ್ ಶಿಬಿರವು 15 ದಿನಗಳ ಕಾಲ ನಡೆಯಲಿದ್ದು, ಉಚಿತವಾಗಿ ಕ್ಯಾನ್ಸರ್ ತಪಾಸಣೆಯನ್ನು ನಡೆಸಲಾಗುತ್ತದೆ.

Leave a Reply

comments

Related Articles

error: