ಕರ್ನಾಟಕ

ಕಲಾವಿದರಿಗಾಗಿ ಅರ್ಜಿ ಆಹ್ವಾನ ಅವಧಿ ವಿಸ್ತರಣೆ

ಮಂಡ್ಯ, ಜೂ. 28 : ಭಾರತ ಸರ್ಕಾರ ಮಾಹಿತಿ ಮತ್ತು ಪ್ರಸರಣ ಮಂತ್ರಾಲಯದ ಹಾಡು ಮತ್ತು ನಾಟಕ ವಿಭಾಗ ವತಿಯಿಂದ ಹಾಡು ಮತ್ತು ನಾಟಕ ವಿಭಾಗದೊಂದಿಗೆ ನೋಂದಾಯಿಸಿಕೊಳ್ಳುವುದಕ್ಕಾಗಿ ಸಮ್ಮತಿಯುಳ್ಳ ಖಾಸಗಿ ಸಾಂಸ್ಕೃತಿಕ ತಂಡಗಳು ಮತ್ತು ಸಕಾಲಿಕ ಕಲಾವಿದರಿಂದ ಆಹ್ವಾನಿಸಲಾಗಿದ್ದ ಅರ್ಜಿ ಸಲ್ಲಿಕೆಯ ಅವಧಿಯನ್ನು ಜುಲೈ 25 ರವರೆಗೆ ವಿಸ್ತರಿಸಲಾಗಿದೆ.

ಹಾಡು ಮತ್ತು ನಾಟಕವು ಅಂತರ ವ್ಯಕ್ತಿ ಸಂವಹನದಲ್ಲಿ ತೊಡಗಿಕೊಂಡಿರುವ ವಿವಿಧ ರೀತಿಯ ಪ್ರಕಾರಗಳ ಪ್ರದರ್ಶನ ಕಲೆಗಳನ್ನು ಬಳಸಿಕೊಂಡು, ಕೇಂದ್ರ ಸರ್ಕಾರದ ನೀತಿಗಳನ್ನು ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ಪ್ರಚಾರ ಮಾಡುತ್ತಿರುವ ಮಾಹಿತಿ ಮತ್ತು ಪ್ರಸರಣ ಮಂತ್ರಾಲಯವು ಮಾಧ್ಯಮ ಘಟಕಗಳಲ್ಲಿ ಪ್ರಮುಖವಾಗಿದೆ.

ಪ್ರಧಾನವಾಗಿ ಗ್ರಾಮೀಣ ಪ್ರದೇಶದವರಿಗಾಗಿ ಜಾತಿಗಳ ನಡುವಿನ ಭಾತೃತ್ವ, ರಾಷ್ಟ್ರೀಯ ಸಮಗ್ರತೆ, ಸಾಮಾಜಿಕ ಪಿಡುಗುಗಳ ನಿವಾರಣೆ ಹಾಗೂ ಇತ್ಯಾದಿ ಧ್ಯೇಯ ವಿಷಯಗಳನ್ನು ವಿಭಾಗವು ತನ್ನ ಚಟುವಟಿಕೆಗಳ ಮೂಲಕ ಭಾರತದ ವಿವಿಧೆಡೆ ಆಯಾ ಪ್ರದೇಶದ ಭಾಷೆಗಳಲ್ಲಿನ ಜನಪ್ರಿಯ ಜಾನಪದ ಮತ್ತು ಪರಂಪರೆಗಳ ಪ್ರಕಾರಗಳ ಬಳಸಿಕೊಂಡು ದೇಶದ ವಿವಿಧ ಭಾಷೆಗಳ ಪ್ರದೇಶಗಳಲ್ಲಿ ಪ್ರಚುರಪಡಿಸಲಿದೆ.

ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ ವಿಳಾಸ www.dfp.nic.in ದೂರವಾಣಿ ಸಂಖ್ಯೆ 080-25502164 ನ್ನು ಸಂಪರ್ಕಿಸಬಹುದು.

-ಎನ್.ಬಿ.

Leave a Reply

comments

Related Articles

error: