ಕರ್ನಾಟಕಪ್ರಮುಖ ಸುದ್ದಿಮೈಸೂರು

ರಾಜ್ಯಮಟ್ಟದ ಬ್ರಾಹ್ಮಣ ಯುವ ಸಮಾವೇಶ

ಮೈಸೂರಿನಲ್ಲಿ ರಾಜ್ಯಮಟ್ಟದ ಬ್ರಾಹ್ಮಣ ಯುವ ಸಮಾವೇಶವನ್ನು ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳ ಯುವ ಜನತೆ ಸಮಾವೇಶದಲ್ಲಿ ಪಾಲ್ಗೊಳ್ಳುವರು ಎಂದು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಮಾ.ವಿ.ರಾಂಪ್ರಸಾದ್ ತಿಳಿಸಿದರು.

ಅವರು ನಗರದ ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಸಮಾವೇಶವನ್ನು ಅ.15 ಮತ್ತು 16ರಂದು ನಗರದ ಶಂಕರಮಠದ ವಿದ್ಯಾಶಂಕರ ನಿಲಯದ ಆವರಣದಲ್ಲಿ ಆಯೋಜಿಸಲಾಗಿದ್ದು  ಅ. 15ರ ಶನಿವಾರ ಬೆಳಿಗ್ಗೆ 10:30ಕ್ಕೆ ಮಾಜಿ ರಾಜ್ಯಪಾಲ ಶ್ರೀರಾಮಾ ಜೋಯಿಸ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಮುಳ್ಳೂರು ಗುರುಪ್ರಸಾದ್ ವಹಿಸುವರು. ಸಮಾವೇಶದಲ್ಲಿ ಐದು ಸಾವಿರ ಯುವ ಜನರು ಪಾಲ್ಗೊಳ್ಳುವರು. ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಅಂದು ಸಂಜೆ 4 ಗಂಟೆಗೆ ಕೋಟೆ ಆಂಜನೇಯ ದೇವಸ್ಥಾನದಿಂದ ವಿಪ್ರ ಜಾಗೃತಿ ಜಾಥ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರಿನ ಯದುಗಿರಿ ಯತಿರಾಜ ಮಠದ ರಾಮಾನುಜ ನಾರಾಯಣ ಜೀಯರ್ ಸ್ವಾಮೀಜಿ ಸಮಾರೋಪದ ಸಾನಿಧ್ಯ ವಹಿಸುವರು.  ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷ ವೆಂಕಟನಾರಾಯಣ್  ಹಾಗೂ ಉಳಳೂರು ಗುರುಪ್ರಸಾದ್ ಅಧ್ಯಕ್ಷತೆ ವಹಿಸುವರು. ಸಚಿವರು, ಶಾಸಕರು ಹಾಗೂ ಚಲನಚಿತ್ರ ನಟರು ಪಾಲಗೊಳ್ಳುವರು. ಈ ಸಂದರ್ಭದಲ್ಲಿ ವಿಪ್ರ ಸೇವಾರತ್ನ ಮತ್ತು ಯುವ ಸಾಧಕ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಫೋನ್ ನಂಬರ್ 9945657636 ಮತ್ತು 9880752727 ಅನ್ನು ಸಂಪರ್ಕಿಸಬಹುದು.

ಬೇಡಿಕೆ : ಬ್ರಾಹ್ಮಣ ಸಮುದಾಯಕ್ಕೆ ಸರ್ಕಾರದ ಸೌಲಭ್ಯಗಳಿಲ್ಲ. ಕುಲಕಸುಬಿಗೆ ಬೇಡಿಕೆ ಇಲ್ಲದೆ ಸಂಕಷ್ಟಕೀಡಾಗಿದೆ. 50 ಲಕ್ಷವಿರುವ ಜನಸಂಖ್ಯೆಯನ್ನು ಸರ್ಕಾರ ಕೇವಲ 15 ರಿಂದ 20 ಲಕ್ಷವೆಂದು ಪರಿಗಣಿಸಿ ಅಲ್ಪಸಂಖ್ಯಾತರ ಪಟ್ಟಿಯಲ್ಲಿ ಸೇರಿಸಿದ್ದಾರೆ. ಜನಗಣತಿಯಲ್ಲೂ ಮೋಸವಾಗಿದೆ. ಆದರೆ ಅಲ್ಪಸಂಖ್ಯಾತರಿಗೆ ಸಿಗುವ ಯಾವುದೇ ಸವಲತ್ತುಗಳು ದೊರೆಯುತ್ತಿಲ್ಲ. ಮುಂದುವರೆದವರು ಎನ್ನುವ ಹಣೆಪಟ್ಟಿ ಹೊಂದಿರುವ ಬ್ರಾಹ್ಮಣ ಸಮಾಜದಲ್ಲಿಯೂ ಆರ್ಥಿಕವಾಗಿ ಹಿಂದುಳಿದ ಲಕ್ಷಾಂತರ ಮಂದಿ ಇದ್ದಾರೆ ಅವರುಗಳಿಗೆ ಸರ್ಕಾರದಿಂದ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.

ಜಯಂತಿ : ಸರ್ಕಾರವು ರಜೆ ಘೋಷಣೆ ಮಾಡದೆ ಶಂಕರ, ರಾಮಾನುಜ ಹಾಗೂ ಮಧ್ವಾಚಾರ್ಯರುಗಳ ಜಯಂತಿಯನ್ನು ಒಂದೇ ದಿನದಂದು ನಿಗದಿಪಡಿಸಿ ಸರ್ಕಾರದ ಮಟ್ಟದಲ್ಲಿ ಆಚರಿಸಲಿ. ಪ್ರಸಕ್ತ ಸಾಲಿನಿಂದ ಮೈಸೂರು ನಗರಪಾಲಿಕೆ ವತಿಯಿಂದ ಆರ್ಥಿಕವಾಗಿ ಹಿಂದುಳಿದವರಿಗೆ ಲ್ಯಾಪ್ ಟ್ಯಾಪ್ ವಿತರಿಸಲಾಗುತ್ತಿದ್ದು ಇದರ ಸದುಪಯೋಗ ಪಡೆಯಿರಿ ಎಂದು ನಗರಪಾಲಿಕೆ ಸದಸ್ಯ ಮಾ.ವಿ.ರಾಂಪ್ರಸಾದ್ ಅವರು ಸಮಾಜದ ಬಾಂಧವರಿಗೆ ಕರೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮೈಸೂರಿನ ಅಧ್ಯಕ್ಷ ಡಿ.ಟಿ. ಪ್ರಕಾಶ್, ಮಾಜಿ ನಗರಪಾಲಿಕೆ ಸದಸ್ಯ ಎಂ.ಡಿ. ಪಾರ್ಥಸಾರಥಿ, ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಉಪಾಧ್ಯಕ್ಷ ಶ್ರೀಧರ ಮೂರ್ತಿ ಉಪಸ್ಥಿತರಿದ್ದರು.

Leave a Reply

comments

Related Articles

error: