ಕರ್ನಾಟಕಪ್ರಮುಖ ಸುದ್ದಿಮೈಸೂರು

ಅ. 16ರಂದು ವಿಶ್ವ ಅರವಳಿಕೆ ದಿನಾಚರಣೆ

ವಿಶ್ವ ಅರವಳಿಕೆ ದಿನಾಚರಣೆಯನ್ನು ನಗರದ ಅರವಳಿಕೆ ತಜ್ಞರ ಸಂಘದಿಂದ ಅ.16ರಂದು ನಡೆಸಲಾಗುವುದು ಎಂದು ಸಂಘದ ಕಾರ್ಯದರ್ಶಿ ಡಾ.ರಾಣಿ ತಿಳಿಸಿದರು.

ಅವರು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಸಾರ್ವಜನಿಕರಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲು ಮೈಸೂರು ವಿಭಾಗದ ಅರವಳಿಕೆ ತಜ್ಞರಿಂದ ಅ.15ರಂದು ರಕ್ತದಾನ ಶಿಬಿರವನ್ನು ನಗರದ ಕೆ.ವಿ.ಸಿ. ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ಆಯೋಜಿಸಲಾಗಿದೆ. ಸಂಗ್ರಹಿತ ರಕ್ತವನ್ನು ನಗರದ ಕೆ.ಆರ್. ಆಸ್ಪತ್ರೆಗೆ ನೀಡಲಾಗುವುದು. ಈಗಾಗಲೇ ಎಪ್ಪತ್ತೈದು ಜನ ವೈದ್ಯರು ನೋಂದಣಿ ಮಾಡಿದ್ದಾರೆ.

ಅ.16ರ ವಿಶ್ವ ಅರವಳಿಕೆ ದಿನಾಚರಣೆಯಂದು ಕೋಟೆ ಆಂಜನೇಯ ದೇವಸ್ಥಾನದಿಂದ ಜೆ.ಕೆ. ಮೈದಾನದವರೆಗೆ ಸಂಘದಿಂದ ವಾಕಥಾನ್ ಆಯೋಜಿಸಲಾಗಿದೆ. ಸಂಜೆ 7ಕ್ಕೆ  ಹೋಟೆಲ್ ಬೇ ದ ವೇನಲ್ಲಿ ವಿಚಾರ ಸಂಕಿರಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

ಅನಸ್ತೆಸಿಯಾ ಸುರಕ್ಷತಾ ವೈದ್ಯ ಪದ್ಧತಿಯಾಗಿದ್ದು ಪ್ರಾಣ ಹಾನಿ ಸಂಭವಿಸುವುದಿಲ್ಲ ಈ ಬಗ್ಗೆ ಶ್ರೀಸಾಮಾನ್ಯರಲ್ಲಿ ತಪ್ಪು ತಿಳುವಳಿಕೆ ಮೂಡಿದೆ. ರಸ್ತೆ ಅಪಘಾತವಾದಾಗ ಅಥವಾ ಇನ್ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಮೊದಲು ಅರವಳಿಕೆ ತಜ್ಞರೇ ಪ್ರಮುಖ ಪಾತ್ರ ವಹಿಸುವರು. ಹೊಟ್ಟೆಯಲ್ಲಿರುವ ಭ್ರೂಣದಿಂದ ವಯೋವೃದ್ಧರವರೆಗೂ ಶಸ್ತ್ರಚಿಕಿತ್ಸೆ ಸಮಯದಲ್ಲಿ ಅರವಳಿಕೆ ಅತಿ ಅವಶ್ಯವಾಗಿದ್ದು ಶಸ್ತ್ರ ಚಿಕಿತ್ಸೆ ಎನ್ನುವುದು ಟೀಮ್ ಕೆಲಸವಾಗಿದೆ. ವಿಜ್ಞಾನ ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆಯಿಂದಾಗಿ ಅರವಳಿಕೆ ಕ್ಷೇತ್ರದ ಕಾರ್ಯವೈಖರಿಯಲ್ಲಿ ಹಲವಾರು ವಿನೂತನ ಪದ್ಧತಿಗಳು ಬಂದಿವೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅರವಳಿಕೆ ತಜ್ಞರ ಸಂಘದ ಅಧ್ಯಕ್ಷೆ ಡಾ. ಅರ್ಚನ, ಡಾ. ಮೀರಾ ಉಪಸ್ಥಿತರಿದ್ದರು.

Leave a Reply

comments

Related Articles

error: