ಸುದ್ದಿ ಸಂಕ್ಷಿಪ್ತ

‘ಕ್ವೀನ್ಸ್ ಪ್ಯಾರೆಡೈಸ್’ ಫ್ಯಾಷನ್ ಶೋ

ಮೈಸೂರಿನ ಮಹಿಳೆಯರಿಗಾಗಿಯೇ ‘ಕ್ವೀನ್ಸ್ ಪ್ಯಾರೆಡೈಸ್’ ಸಾಂಸ್ಕೃತಿಕ ಹಬ್ಬವನ್ನು ನಗರದ ರೋಲಿಂಗ್ ಮೀಡಿಯಾ ಹೌಸ್ ಹಾಗೂ ಬ್ಲೂ ಬರ್ಡ್ ಸಹಯೋಗದೊಂದಿಗೆ ಆಯೋಜಿಸಲಾಗಿದೆ ಎಂದು ಸತೀಶಕುಮಾರ ಪೊನ್ನಾಚಿ ತಿಳಿಸಿದರು.

ಅವರು ನಗರದ ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಅ. 15 ರ ಸಂಜೆ 4 ಗಂಟೆಗೆ ನಗರದ ಸಿಪಾಯಿ ಗ್ರಾಂಡೆ ಹೋಟೆಲ್ ನಲ್ಲಿ ನಡೆಯಲಿರುವ ಕ್ವೀನ್ಸ್ ಪ್ಯಾರಡೈಸ್ ಹಬ್ಬದಲ್ಲಿ ಮಹಿಳೆಯರಿಗಾಗಿ ಸಂಗೀತ, ನೃತ್ಯ, ಫ್ಯಾಷನ್ ಶೋ ಸೇರಿದಂತೆ ಇನ್ನಿತರ ಮನೋರಂಜನಾ ಕ್ರೀಡೆಯನ್ನು ಆಯೋಜಿಸಲಾಗಿದೆ. ಈ ಸಂದರ್ಭ ಯುವತಿಯರಿಗಾಗಿ ಮಿಸ್ ಏಂಜೆಲ್ ಹಾಗೂ ಮಹಿಳೆಯರಿಗಾಗಿ ಮಿಸ್ ಕ್ವೀನ್ ಪ್ಯಾಷನ್ ಶೋ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಯಾಂತ್ರಿಕ ಬದುಕಿನಲ್ಲಿ ಮಹಿಳೆಯರು ವೃತಿಪರ, ಕೌಟುಂಬಿಕ ಗೊಂದಲಗಳಿಗೆ ಸಿಲುಕಿ ಮಾನಸಿಕ ದೃಢತೆ ಕಳೆದುಕೊಳ್ಳುತ್ತಿದ್ದು ಅವರ ಮನ ಮುದಗೊಳಿಸಲು ಕ್ವೀನ್ಸ್ ಪ್ಯಾರಡೈಸ್ ವಿನೂತನ ಕಾರ್ಯಕ್ರಮವಾಗಿದ್ದು. ಪ್ರವೇಶ ದರವು ಒಬ್ಬರಿಗೆ ಸಾವಿರ ರೂಪಾಯಿ ನಿಗದಿ ಪಡಿಸಲಾಗಿದೆ. ಸಂಗ್ರಹವಾದ ಹಣವನ್ನು ನಗರದ ಚಿಗುರು ಆಶ್ರಮಕ್ಕೆ ದೇಣಿಗೆ ನೀಡಲಾಗುವುದು ಎಂದು ತಿಳಿಸಿದರು. ಸುದ್ಧಿಗೋಷ್ಠಿಯಲ್ಲಿ ಬ್ಲೂ ಬರ್ಡ್ ನ ನೂತನ್ ನಂದನ ಹಾಗೂ ಶೇಖರ್ ಉಪಸ್ಥಿತರಿದ್ದರು.

Leave a Reply

comments

Related Articles

error: