ಕರ್ನಾಟಕ

ಸಾಲ ಮರುಪಾವತಿಸಲಾಗದೇ ರೈತ ನೇಣಿಗೆ ಶರಣು

ರಾಜ್ಯ(ಬಾಗಲಕೋಟ)ಜೂ.29:-ಸಾಲಬಾಧೆ ತಾಳಲಾರದೇ ರೈತನೋರ್ವ ನೇಣು ಬಿಗಿದು  ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಮ್ಮನಕಟ್ಟಿ ಗ್ರಾಮದಲ್ಲಿ ನಡೆದಿದೆ.

ಮೃತನನ್ನು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಚಿಮ್ಮನಕಟ್ಟಿ ತುಕಾರಾಮ್ ಲಕ್ಕಪ್ಪನವರ (55) ಎಂದು ಗುರುತಿಸಲಾಗಿದೆ.  ಮನೆ ಮುಂದಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.  ಎಸ್ ಬಿ ಐ,ಕೃಷಿಪತ್ತಿನ ಸಹಕಾರಿ ಸಂಘ ಸೇರಿ  4 ,65,000 ಸಾಲ ಮಾಡಿಕೊಂಡಿದ್ದ.ಆರು  ಎಕರೆ ಹೊಲದಲ್ಲಿ ಏನೂ ಬಿತ್ತಿರಲಿಲ್ಲ.ಎರಡು ಬೋರ್ ವೆಲ್ ಗಳು ವಿಫಲವಾಗಿದ್ದವು. ಸಾಲ ಮರುಪಾವತಿಸಲಾಗದೇ ಆತ್ಮಹತ್ಯೆಗೆ ರಣಾಗಿದ್ದಾನೆ.
ಸ್ಥಳಕ್ಕೆ ಬಾದಾಮಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: