ದೇಶಪ್ರಮುಖ ಸುದ್ದಿವಿದೇಶ

ಇಂಡಿಯಾ ಹೆಸರು ಕೈಬಿಡಲು ಮುಂದಾದ ವಿಜಯ್ ಮಲ್ಯ

ಲಂಡನ್, ಜೂ.29 : ಭಾರತದಲ್ಲಿ ಬ್ಯಾಂಕುಗಳಿಂದ ಸಾಲ ಪಡೆದು ಲಂಡನ್‍ನಲ್ಲಿ ನೆಲೆಸಿರುವ ಸಾಲದ ದೊರೆ ವಿಜಯ್ ಮಲ್ಯ ಅವರು ತಮ್ಮ ಒಡೆತನದ ಫಾರ್ಮುಲಾ 1 ರೇಸಿಂಗ್ ತಂಡ ಫೋರ್ಸ್ ಇಂಡಿಯಾದ ಹೆಸರು ಬದಲಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಫಾರ್ಮುಲಾ 1 ತಂಡ ಫೋರ್ಸ್ ಇಂಡಿಯಾ ಹೆಸರನ್ನು ಬದಲಿಸಿ ತಂಡಕ್ಕೆ ಅಂತರರಾಷ್ಟ್ರೀಯ ಮನ್ನಣೆ ನೀಡುವ ಜೊತೆಗೆ ಹೆಚ್ಚು ಪ್ರಾಯೋಜಕರನ್ನು ಆಕರ್ಷಿಸಲು ಯೋಜಿಸಿದ್ದಾರೆ. ಭಾರತದ ವಿವಿಧ ಬ್ಯಾಂಕ್‍ಗಳಿಗೆ ಸುಮಾರು 9 ಸಾವಿರ ಕೋಟಿ ರೂಪಾಯಿ ಸಾಲ ಪಾವತಿಸಬೇಕಿರುವ ಅವರು ಲಂಡನ್ ನಲ್ಲಿದ್ದು, ತಮ್ಮ ಹೆಸರಲ್ಲಿ 6 ಉದ್ಯಮಗಳನ್ನು ನೋಂದಾಯಿಸಿದ್ದಾರೆ.

ಭಾರತದಲ್ಲಿ ಗ್ರ್ಯಾನ್ ಪ್ರಿ ನಡೆಯುತ್ತಿಲ್ಲ. ಹೀಗಾಗಿ ಭಾರತೀಯ ಪ್ರಾಯೋಜಕರು ಪ್ರಾಯೋಜಕತ್ವ ವಹಿಸಿಕೊಳ್ಳಲು ಮುಂದಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಮಲ್ಯ ಒಡೆತನದ ಫೋರ್ಸ್ ಇಂಡಿಯಾಗೆ ಜಾಗತಿಕ ಮಟ್ಟದ ಪ್ರಾಯೋಜಕರನ್ನು ಆಕರ್ಷಿಸುವ ಸಲುವಾಗಿ ಇಂಡಿಯಾ ಹೆಸರನ್ನು ಕೈಬಿಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

-ಎನ್.ಬಿ.

Leave a Reply

comments

Related Articles

error: