ಮೈಸೂರು

ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ: ನರ್ಸಿಂಗ್ ನಲ್ಲಿಯೂ ಪಿಹೆಚ್ ಡಿ ಬೇಡಿಕೆ, ಪ್ರಸ್ತಾವನೆ ಸಲ್ಲಿಸಲಾಗಿದೆ : ಡಾ.ಕೆ.ಎಸ್.ರವೀಂದ್ರನಾಥ್

ಮೈಸೂರು,ಜೂ.29:- ಶ್ರೀ ರಾಜೇಂದ್ರ ಶತಮಾನೋತ್ಸವ ಭವನದದಲ್ಲಿ ಜೆಎಸ್ ಎಸ್ ಕಾಲೇಜ್ ಆಫ್ ನರ್ಸಿಂಗ್ ವತಿಯಿಂದ  ಎರಡು ದಿನಗಳ ಕಾಲ ನಡೆಯಲಿರುವ 21ನೇ ಶತಮಾನದ ಶಿಕ್ಷಕರಿಗೆ ಚೌಕಟ್ಟು ಕುರಿತ ರಾಷ್ಟ್ರೀಯ ಸಮ್ಮೇಳನ ಕ್ಕೆ ಗುರುವಾರ ಚಾಲನೆ ನೀಡಲಾಯಿತು.

ಸಮ್ಮೇಳನಕ್ಕೆ ರಾಜೀವಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ನ ಉಪಕುಲಪತಿ ಡಾ.ಕೆ.ಎಸ್.ರವೀಂದ್ರನಾಥ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಈಗಾಗಲೇ ರಾಜೀವ್ ಗಾಂಧಿ ವಿಶ್ವವಿದ್ಯಾಲಯದಡಿ 1,500 ನರ್ಸಿಂಗ್ ಕಾಲೇಜುಗಳಿವೆ. ಇದೀಗ ನರ್ಸಿಂಗ್ ನಲ್ಲಿ ಪಿಹೆಚ್ ಡಿ ಇರಬೇಕೆಂಬ ಬೇಡಿಕೆ ಹೆಚ್ಚುತ್ತಿದ್ದು, ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಇತ್ತೀಚಿನ ದಿನಗಳಲ್ಲಿ ನರ್ಸಿಂಗ್ ನಲ್ಲಿ ತರಬೇತಿ ನೀಡುವವರು ಅಪ್ ಡೇಟ್ ಆಗುತ್ತಲೇ ಇರಬೇಕು. ಕೇವಲ ಚಿಕಿತ್ಸೆ ನೀಡುವುದು ಮಾತ್ರ ಅವರ ಕೆಲಸವಲ್ಲ. ನರ್ಸಿಂಗ್ ವಿದ್ಯಾರ್ಥಿಗಳು ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು. ವೈದ್ಯರು ರೋಗಿಗಳಿಗೆ ಇಂಥಹ  ಔಷಧಗಳನ್ನು ನೀಡಿ ಎಂದು ಹೇಳುತ್ತಾರಷ್ಟೇ. ಅದನ್ನು ನೀಡುವುದು ಶುಶ್ರೂಷಕರೇ ಆಗಿರುತ್ತಾರೆ. ಮುಂದಿನ ದಿನಗಳಲ್ಲಿ ನರ್ಸಿಂಗ್ ನಲ್ಲಿಯೂ ಇನ್ನೂ ಹೆಚ್ಚಿನ ಅಭಿವೃದ್ಧಿಗಳನ್ನು ಮಾಡಲಾಗುವುದು ಎಂದರು.

ಈ ಸಂದರ್ಭ ಜೆಎಸ್ ಎಸ್ ಆಸ್ಪತ್ರೆಯ ನಿರ್ದೇಶಕರಾದ ಡಾ.ಎಂ.ಡಿ.ರವಿ, ಡಾ.ಪಿ.ಎ.ಕುಶಾಲಪ್ಪ, ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ನ  ಡೀನ್ ಟ್ರೇನಿಂಗ್ ವಿವೇಕಾನಂದ, ಜೆಎಸ್ ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: