ದೇಶಪ್ರಮುಖ ಸುದ್ದಿವಿದೇಶ

ಸಿಕ್ಕಿಂ ಗಡಿಯಲ್ಲಿ ಚೀನಾ ರಸ್ತೆ ನಿರ್ಮಾಣ : ಭೂತಾನ್‍ನಿಂದ ಪ್ರತಿಭಟನೆ

ನವದೆಹಲಿ, ಜೂ.29 : ಚೀನಾ ಗಡಿಯಲ್ಲಿರುವ ಸಿಕ್ಕಿಂ ಸೆಕ್ಟರ್‍ನ ದೋಕಾ ಲಾ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಿರುವ ಚೀನಾ ಕ್ರಮಕ್ಕೆ ಭೂತಾನ್ ಪ್ರತಿಭಟನೆ ವ್ಯಕ್ತಪಡಿಸಿದೆ.

ಈ ವಿಷಯದಲ್ಲಿ ತಾನು ನ್ಯಾಯಸಮ್ಮತವಾಗಿ ನಡೆದುಕೊಳ್ಳುತ್ತಿರುವುದಾಗಿ ಚೀನಾ ನೀಡಿರುವ ಸಮರ್ಥನೆಯನ್ನು ಒಪ್ಪಲು ನಿರಾಕರಿಸಿರುವ ಭೂತಾನ್, ಈ ತಕ್ಷಣವೇ ಆರ್ಮಿ ಕ್ಯಾಂಪ್ ಬಳಿ ಆರಂಭಿಸಿರುವ ಕಾಮಗಾರಿಯನ್ನು ನಿಲ್ಲಿಸಬೇಕೆಂದು ಚೀನಾ ರಾಜತಾಂತ್ರಿಕ ದೂರು ನೀಡಿ ಆಗ್ರಹಿಸಿದೆ.

ಎರಡು ರಾಷ್ಟ್ರಗಳ ನಡುವಿನ ಒಪ್ಪಂದವನ್ನು ಚೀನಾ ಮುರಿದಿದೆ ಎಂದು ಭಾರತದಲ್ಲಿ ಭೂತಾನ್‍ನ ರಾಯಭಾರಿಯಾಗಿರುವ ವೆಟ್ಸಾಪ್ ನಮ್ಜಿಲ್ ಹೇಳಿದ್ದಾರೆ. ಕಾಮಗಾರಿ ಆರಂಭಿಸಿರುವ ದೋಕಾ ಲಾ ವಿವಾದಿತ ಪ್ರದೇಶವಾಗಿದೆ. ಭೂತಾನ್ ಹಾಗೂ ಚೀನಾ ವಿವಾದಿತ ಗಡಿ ಪ್ರದೇಶದಲ್ಲಿ ಶಾಂತಿಯುತ ವಾತಾವರಣ ಕಾಪಾಡಬೇಕು ಎಂಬ ಒಪ್ಪಂದ ಮಾಡಿಕೊಂಡಿವೆ. ಆದರೆ ಚೀನಾದ ಪ್ರಸ್ತುತ ನಡೆಯಿಂದಾಗಿ ಒಪ್ಪಂದವನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ ಎಂದು ಭೂತಾನ್ ಆಕ್ಷೇಪ ವ್ಯಕ್ತಪಡಿಸಿದೆ.

ಪ್ರಸ್ತುತ ‘ದೋಕಾ ಲಾ’ ಪ್ರದೇಶ ಚೀನಾದ ನಿಯಂತ್ರಣದಲ್ಲಿದೆ. ಆದರೆ ಗಡಿ ವಿವಾದ ಇನ್ನೂ ಅಂತಿಮವಾಗಿ ಬಗೆಹರಿದಿಲ್ಲವಾದ ಕಾರಣ ಚೀನಾ ರಸ್ತೆ ನಿರ್ಮಾಣ ಮಾಡಿರುವುದು ಸರಿಯಲ್ಲ ಎಂಬುದು ಭೂತಾನ್ ವಾದ.  ಈ ಹಿನ್ನೆಲೆಯಲ್ಲಿ ಭೂತಾನ್ ರಾಜತಾಂತ್ರಿಕ ಪ್ರತಿಭಟನೆ ತೋರ್ಪಡಿಸಿದೆ.

-ಎನ್.ಬಿ.

Leave a Reply

comments

Related Articles

error: