ಮೈಸೂರು

ಪೇಜಾವರ ಶ್ರೀಗಳನ್ನು ಬೆಂಬಲಿಸಿ ಬಿಜೆಪಿ ಮಹಿಳಾ ಮೋರ್ಚಾದಿಂದ ವಿಶೇಷ ಪೂಜೆ

ಮೈಸೂರು,ಜೂ.29-ಉಡುಪಿ ಶ್ರೀ ಕೃಷ್ಣಮಠದಲ್ಲಿ ಪೇಜಾವರ ಶ್ರೀಗಳು ಇಫ್ತಿಯಾರ್ ಕೂಟ ನಡೆಸಿದ್ದನ್ನು ಬೆಂಬಲಿಸಿ ನಗರದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.

ಅಗ್ರಹಾರದ ಕೆ.ಆರ್.ಪೊಲೀಸ್ ಠಾಣೆ ಪಕ್ಕದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಪೇಜಾವರ ಶ್ರೀಗಳಿಗೆ ಒಳ್ಳೆಯದಾಗಲಿ ಎಂದು ಪೂಜೆ ಸಲ್ಲಿಸಿದ ಕಾರ್ಯಕರ್ತೆಯರು ಬಳಿಕ ಸಾರ್ವಜನಿಕರಿಗೆ ಸಿಹಿ ಹಂಚಿದರು.

ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ಮುಖಂಡರಾದ ನೂರ್ ಫಾತಿಮ್, ಜೋಗಿ ಮಂಜು, ವಿದ್ಯಾ ಅರಸ್, ನಿಶಾಂತ್, ಅನ್ನಪೂರ್ಣ, ಜಯಂತಿ, ರೇವತಿ, ರೇಖಾ, ಜೋಗಿ ಮಂಜು ಇತರರು ಉಪಸ್ಥಿತರಿದ್ದರು. (ವರದಿ-ಎಸ್.ಎನ್,ಎಂ.ಎನ್)

Leave a Reply

comments

Related Articles

error: