ಕರ್ನಾಟಕಪ್ರಮುಖ ಸುದ್ದಿ

ಬುಕ್ಕಿಂಗ್ ರದ್ದು ಮಾಡಿದವರಿಂದಲೇ ಸಾವಿರದ ನಾನೂರು ಕೋಟಿ ರೂ. ಸಂಪಾದಿಸಿದ ರೈಲ್ವೆ!

ನವದೆಹಲಿ, ಜೂ. 29 : ಟಿಕೆಟ್ ರದ್ದು ಮಾಡಿದವರಿಂದಲೇ ಭಾರತೀಯ ರೈಲ್ವೆ ಇಲಾಖೆಗೆ ಕಳೆದ ಸಾಲಿನಲ್ಲಿ ಸಾವಿರದ ನೂನೂರು ಕೋಟಿ ರೂಪಾಯಿ ಆದಾಯವಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಆರ್‍ಟಿಐ ಅರ್ಜಿ ಮೂಲಕ ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ರೈಲ್ವೆ ಇಲಾಖೆಯು, ಕಳೆದ ವರ್ಷಕ್ಕಿಂತ ಈ ವರ್ಷ ಬುಕಿಂಗ್ ಟಿಕೆಟ್‍ಗಳ ರದ್ದತಿಯ ಮೂಲಕ ಶೇ.25.29 ರಷ್ಟು ಹೆಚ್ಚು ಆದಾಯ ಸಂಗ್ರವಾಗಿದೆ. 2015-16 ನೆ ಸಾಲಿನಲ್ಲಿ 11.23 ಬಿಲಿಯನ್, 2014-15 ರಲ್ಲಿ 9.38 ಬಿಲಿಯನ್ ಹಣ ಸಂಗ್ರಹವಾಗಿತ್ತು ಎಂದು ರೈಲ್ವೆ ಇಲಾಖೆಯ ಪ್ಯಾಸೆಂಜರ್ ರಿಸರ್ವೇಷನ್ ಸಿಸ್ಟಮ್‍ನಲ್ಲಿ ದೊರೆತ ಮಾಹಿತಿಯನ್ನು ಇಲಾಖೆ ಉಲ್ಲೇಖಿಸಿದೆ.

ಕಾಯ್ದಿರಿಸಲಾಗದ ಟಿಕೆಟ್ ರದ್ದತಿಯಿಂದಲೂ ರೈಲ್ವೆ ಇಲಾಖೆ ಆದಾಯ ಗಳಿಸುತ್ತಿದೆ. ಆರ್‍ಟಿಐ ಅರ್ಜಿಗೆ ದೊರೆತಿರುವ ಮಾಹಿತಿ ಪ್ರಕಾರ 2016-17ನೇ ಸಾಲಿನಲ್ಲಿ 17.87 ಕೋಟಿ ರೂಪಾಯಿ ಸಂಗ್ರಹವಾಗಿದೆ. 2015-16ನೇ ಸಾಲಿನಲ್ಲಿ 17.23 ಕೋಟಿ, 2014-15 ನೇ ಸಾಲಿನಲ್ಲಿ 14.72 ಕೋಟಿ ರೂಪಾಯಿ ಸಂಗ್ರಹವಾಗಿತ್ತು ಎಂದು ಮಾಹಿತಿ ದೊರೆತಿದೆ.

-ಎನ್.ಬಿ.

Leave a Reply

comments

Related Articles

error: