ಪ್ರಮುಖ ಸುದ್ದಿ

ಸಾಲ ಮನ್ನಾಗೆ ಷರತ್ತು ವಿಧಿಸಿಲ್ಲ: ಸಿದ್ದರಾಮಯ್ಯ

ಪ್ರಮುಖ ಸುದ್ದಿ, ಕೊಪ್ಪಳ, ಜೂ.೨೯: ರೈತರ ಸಾಲದ ಹೊರೆಯನ್ನು ಕಡಿಮೆ ಮಾಡುವ ಉzಶದಿಂದ ಸಹಕಾರಿ ಬ್ಯಾಂಕುಗಳಲ್ಲಿನ ಸಾಲವನ್ನು ಮನ್ನಾ ಮಾಡಿದ್ದು ಅದಕ್ಕೆ ಯಾವುದೇ ರೀತಿಯ ಷರತ್ತುಗಳನ್ನು ವಿಧಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಯ್ಯ ಸ್ಪಷ್ಟನೆ ನೀಡಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹಕಾರ ಸಂಘಗಳಿಂದ ರೈತರು ರಾಜ್ಯ ಸರ್ಕಾರ ಮನ್ನಾ ಮಾಡಿರುವ ಸಾಲಮನ್ನಾ ಯೋಜನೆಗೆ ಷರತ್ತು ವಿಧಿಸಲಾಗಿದೆ ಎನ್ನುವ ಸುದ್ದಿಗಳೆಲ್ಲಾ ಶುದ್ಧ ಸುಳ್ಳು. ರೈತರು ಇಂತಹ ವಿಷಯಗಳಿಗೆ ಕಿವಿಗೊಡಬಾರದು. ಜೂ.೨೦ರವರೆಗೆ ಹೊರ ಬಾಕಿ ಇರುವ ರೈತರ ಸಾಲದಲ್ಲಿ ೫೦ ಸಾವಿರ ಮನ್ನಾ ಮಾಡಲಾಗಿದೆ. ಅಲ್ಪಾವಧಿ ಸಾಲದಲ್ಲಿ ಸುಸ್ತಿ ಬಾಕಿ ಉಳಿಸಿಕೊಂಡಿರುವ ರೈತರು ಡಿ.೩೧ರೊಳಗೆ ಮರುಪಾವತಿ ಮಾಡಬೇಕು. ಮರು ಪಾವತಿ ಮಾಡಿದರೆ ಮಾತ್ರ ೫೦ ಸಾವಿರ ಸಾಲ ಮನ್ನಾ ಮಾಡಲಾಗುತ್ತದೆ. ಹೀಗೆ ಕೆಲ ಷರತ್ತುಗಳನ್ನು ಮುಖ್ಯಮಂತ್ರಿಗಳು ಷರತ್ತು ವಿಧಿಸಿದ್ದಾರೆ ಎನ್ನುವ ಬಗ್ಗೆ ಎಲ್ಲಡೆ ಗೊಂದಲ ಮೂಡಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ. (ವರದಿ ಬಿ.ಎಂ)

Leave a Reply

comments

Related Articles

error: