ಮೈಸೂರು

ಕಬಿನಿ ಹಿನ್ನೀರಿನಲ್ಲಿ ಶವ ಪತ್ತೆ

ಮೈಸೂರು,ಜೂ.29-ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಹಿನ್ನೀರಿನಲ್ಲಿ ಮೃತ ದೇಹವೊಂದು ಪತ್ತೆಯಾಗಿದೆ.

ತಾಲ್ಲೂಕಿನ ರಾಮೇನಹಳ್ಳಿ ಕಾರ್ತಿಕ್ (25) ಮೃತ ವ್ಯಕ್ತಿ. ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಕಾರ್ತಿಕ್ ಈಗ ಶವವಾಗಿ ಪತ್ತೆಯಾಗಿದ್ದಾನೆ. ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಸ್ಥಳಕ್ಕೆ ಎಚ್.ಡಿ.ಕೋಟೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಈ ಕುರಿತು ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: