ಕರ್ನಾಟಕ

ವಿದ್ಯುತ್ ಲೈನ್ ಬದಲಿಸಲು ಒತ್ತಾಯಿಸಿ ಪ್ರತಿಭಟನೆ

ರಾಜ್ಯ(ಮಂಡ್ಯ)ಜೂ.29:-ಶಾಲೆಯ ಮೇಲೆ ಹಾದು ಹೋಗಿರುವ 01ಕೆವಿ ವಿದ್ಯುತ್ ಲೈನ್ ಬದಲಿಸಲು ಒತ್ತಾಯಿಸಿ ವಿದ್ಯಾರ್ಥಿ ಮತ್ತು ಪೋಷಕರು ಚೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೆ‌.ಆರ್ .ಪೇಟೆ ಪಟ್ಟಣದ ಚೆಸ್ಕಾಂ ಕಚೇರಿ ಮುಂದೆ ಪಿಡಿಜಿ ಕೊಪ್ಪಲು ಶಾಲಾ ಮಕ್ಕಳು ಮತ್ತು ಪೋಷಕರಿಂದ ಪ್ರತಿಭಟನೆ ನಡೆಸಿದರಲ್ಲದೇ, ನಾಲ್ಕು ವರ್ಷಗಳಿಂದಲೂ ಲೈನ್ ಬದಲಿಸಲು ಮನವಿ ಕೊಡುತ್ತಿದ್ದರೂ  ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳಿಗೆ  ಬಿಸಿ ಮುಟ್ಟಿಸಿದರು. ಪುಟಾಣಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆದರಿಕ ಚೆಸ್ಕಾಂ ಅಧಿಕಾರಿಗಳು  ಇನ್ನೂ 15 ದಿನದಲ್ಲಿ ಲೈನ್ ಬದಲಿಸಿಕೊಡುವ ಭರವಸೆ ನೀಡಿದ್ದು,ಅಧಿಕಾರಿಗಳ ಭರವಸೆ ಮೇರೆಗೆ ಪ್ರತಿಭಟನೆ ಕೈಬಿಟ್ಟಿದ್ದಾರೆ. ಪ್ರತಿಭಟನೆಯಲ್ಲಿ ಶಾಲಾ ಮುಖ್ಯ ಶಿಕ್ಷಕ ಸ್ವಾಮಿ ಕೆ.ಪಿ.ಸಹಶಿಕ್ಷಕಿ ನಾಗವೇಣಿ,ಎಸ್.ಡಿ.ಎಂ.ಸಿ.ಅಧ್ಯಕ್ಷ ಈರೇಗೌಡ,ಗ್ರಾ.ಪಂ.ಸದಸ್ಯರಾದ ಹರಿಣಿಮಹೇಶ್,ಗ್ರಾಮಸ್ಥರಾದ ಡಿ.ನರಸಿಂಹ ,ಕುಮಾರ,ರಾಜೇಶ,ರವಿ,ದೇವೇಗೌಡ,ಮಂಜೇಗೌಡ ರೇಖಾ,ಕುಮ್ಮಿ, ಶಾಲಾಮಕ್ಕಳು ಉಪಸ್ಥಿತರಿದ್ದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: