ಸುದ್ದಿ ಸಂಕ್ಷಿಪ್ತ

ದಸರಾ ಕವಿಗೋಷ್ಠಿ ಹಾಗೂ ಯಾತ್ರಾರ್ಥಿಗಳಿಗೆ ಶುಭ ಹಾರೈಕೆ ಕಾರ್ಯಕ್ರಮ

ಉತ್ತರ ಭಾರತ ಯಾತ್ರಾರ್ಥಿಗಳಿಗೆ ಶುಭ ಹಾರೈಕೆ ಸಮಾರಂಭವನ್ನು ಕರ್ನಾಟಕ ರಾಜ್ಯ ಒಕ್ಕಲಿಗ ವಿಕಾಸ ವೇದಿಕೆಯಿಂದ ಅ.13ರ ಮಧ್ಯಾಹ್ನ 2:30ಕ್ಕೆ ನಗರದ ಹೋಟೆಲ್ ಗೋವರ್ಧನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಉದ್ಘಾಟಿಸುವರು. ವೇದಿಕೆಯ ಅಧ್ಯಕ್ಷೆ ಹೆಚ್.ಎಲ್.ಯಮುನಾ ಅಧ್ಯಕ್ಷತೆ ವಹಿಸುವರು. ಪ್ರಾಸ್ತಾವಿಕವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕ ಟಿ.ಎನ್.ದಾಸೇಗೌಡ ನುಡಿವರು. ಮುಖ್ಯ ಅತಿಥಿಗಳಾಗಿ ಮಡಿಕೇರಿ ಜಿ.ಪಂ.ಮಾಜಿ ಅಧ್ಯಕ್ಷೆ ಚಂದ್ರಕಲಾ, ಎಫ್.ಪಿ.ಎ.ಐ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ತಾ.ಪಂ.ಮಾಜಿ ಅಧ್ಯಕ್ಷೆ ಮಂಜುಳಾ ಮಂಜುನಾಥ್ ಕರ್ನಾಟಕ ಕಾವಲು ಪಡೆ ಅಧ್ಯಕ್ಷ ಮೋಹನ್ ಕುಮಾರ್ ಗೌಡ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ.

ದಸರಾ ಕವಿಗೋಷ್ಠಿ : ದಸರಾ ಕವಿಗೋಷ್ಠಿಯನ್ನು ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಉದ್ಘಾಟಿಸುವರು, ಸಾಹಿತಿ ಡಾ.ಎಸ್.ಪಿ.ಯೋಗಣ್ಣ ಅಧ್ಯಕ್ಷತೆ ವಹಿಸುವರು. ಟಿ.ಸತೀಶ್ ಜವರೇಗೌಡ ಶಂಕರವಿಲಾಸ ಸಂಸ್ಕೃತ ಫಾಠಶಾಲೆಯ ಪ್ರಾಂಶುಪಾಲ ವಿದ್ವಾನ್ ಶ್ರೀನಿವಾಸ ಮೂರ್ತಿ ಹಾಗೂ ಕೆ.ಆರ್.ನಗರದ ಸ.ಪ್ರ.ದರ್ಜೆ ಕಾಲೇಜಿನ ಡಾ.ಕೆ.ಎಸ್.ದಿವ್ಯಾ ಉಪಸ್ಥಿತರಿರುವರು.

Leave a Reply

comments

Related Articles

error: