ಕರ್ನಾಟಕ

ಅಡುಗೆ ತಯಾರಿಕೆಗೂ ಮುನ್ನ ಸ್ವಚ್ಛತೆಯನ್ನು ಕಾಪಾಡಿ : ರಾಜು ಕಿವಿಮಾತು

ರಾಜ್ಯ(ಚಾಮರಾಜನಗರ)ಜೂ.29:- ಅಡುಗೆ ತಯಾರಿಕೆಗೂ ಮುನ್ನ ಸ್ವಚ್ಛತೆಯನ್ನು ಕಾಪಾಡಿ ಎಂದು ತಾ.ಪಂ ಅಧ್ಯಕ್ಷ ರಾಜು ಕಿವಿಮಾತು ಹೇಳಿದರು.
ಕೊಳ್ಳೇಗಾಲ ಪಟ್ಟಣದ ಗುರುಭವನದಲ್ಲಿ ಬುಧವಾರ ಅಕ್ಷರ ದಾಸೋಹ ತಾಲೂಕು ಪಂಚಾಯತ್ ವತಿಯಿಂದ ಕೊಳ್ಳೆಗಾಲ ಹಾಗೂ ಹನೂರು ಶೈಕ್ಷಣಿಕ ವಲಯದ ಅಡುಗೆ ಸಿಬ್ಬಂದಿಯವರಿಗೆ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರ ನೀಡುವ ಅಡುಗೆ ಸಾಮಾಗ್ರಿಗಳನ್ನು ಮುಖ್ಯ ಶಿಕ್ಷಕರಿಂದ ಪಡೆಯುವ ಮೊದಲು ಸರಿಯಾದ ರೀತಿಯಲ್ಲಿ ಪೌಷ್ಠಿಕತೆ ಇದೆಯೋ ಇಲ್ಲವೋ  ಪರೀಶಿಲನೆ ನಡೆಸಿ ನಂತರ ಅಡುಗೆಗೆ ಬಳಸಿ ಎಂದರು. ಅಡುಗೆ ಮನೆ, ಪಾತ್ರೆಗಳು ಸ್ವಚ್ಛತೆ ವಾಗಿವೆಯೇ ಎಂಬುದನ್ನು ಪರಿಶೀಲಿಸಿ, ಸಹಾಯಕಿಯರು ಶುದ್ಧ ಉಡುಪುಗಳನ್ನು ಧರಿಸಿ ಬೇಜಾವ್ದಾರಿಯನ್ನು ಹೋಗಲಾಡಿಸಿ ಅಡುಗೆ ತಯಾರಿಸಿ, ಶಾಲೆಗೆ ಬರುವ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಂಡು ಪೌಷ್ಠಿಕ ಆಹಾರವನ್ನು ನೀಡಿ ಎಂದರು.
ಶಾಲೆಗಳಲ್ಲಿ ಅಡುಗೆ ಮಾಡುವ ಸಹಾಯಕಿಯರುಗಳಿಗೆ ವೇತನ ಹೆಚ್ಚಳದ ಬಗ್ಗೆ ಮುಂದಿನ ದಿನದಲ್ಲಿ ನಡೆಯುವ ಜಿ.ಪಂ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸ್ವಾಮಿ, ತಾಲೂಕು ಅಕ್ಷರ ದಾಸೋಹದ ಹನುಮಶೆಟ್ಟಿ, ಬಿಆರ್‍ಸಿ ಮಂಜುಳ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹದೇವಕುಮಾರ್, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಬುಕಾನಿ, ಶಿಕ್ಷಕರಾದ ನಂದೀಶ್, ಶಾಂತಮೂರ್ತಿ, ಮಾಂಬಳ್ಳಿ ಪ್ರವೀಣ್ ಹಾಗೂ ಅಡುಗೆ ಸಹಾಯಕಿಯರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: