ಕರ್ನಾಟಕ

ಕಟ್ಟಡಗಳನ್ನು ಸುರಕ್ಷಿತಗೊಳಿಸಿ ಕಾಮಗಾರಿ ಮುಂದುವರಿಸಿ : ಶಾಸಕ ಎಸ್.ಜಯಣ್ಣ

ರಾಜ್ಯ(ಚಾಮರಾಜನಗರ)ಜೂ.29:-  ಶಾಲೆಯ ಕಟ್ಟಡಗಳನ್ನು ಸುರಕ್ಷಿತಗೊಳಿಸಿ ನಂತರ ಎನ್‍ಹೆಚ್ ರಸ್ತೆ ಕಾಮಗಾರಿಯನ್ನು ಮುಂದುವರಿಸುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಶಾಸಕ ಎಸ್.ಜಯಣ್ಣ ತಿಳಿಸಿದರು.
ಕೊಳ್ಳೇಗಾಲ ಪಟ್ಟಣದ  ಸರ್ಕಾರಿ ಎಸ್‍ವಿಕೆ ಪದವಿಪೂರ್ವ ಕಾಲೇಜಿನ ಎನ್‍ಹೆಚ್ ಕಾಮಗಾರಿಯಿಂದಾಗಿ ತೆರವಾಗುವ ಕಟ್ಟಡಗಳನ್ನು ಪರೀಶಿಲನೆ ನಡೆಸಿ ನಂತರ ಸ್ಥಳದಲ್ಲೇ ಎನ್‍ಹೆಚ್ ಅಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿ ಈಗಾಗಲೇ ಸುಮಾರು ನಾಲ್ಕೈದು ಹಳೆ ಕಟ್ಟಡಗಳು ಎನ್‍ಹೆಚ್ ರಸ್ತೆ ಕಾಮಗಾರಿಯಿಂದ ತೆರವು ಆಗಿದೆ. ಇನ್ನೂ ಉಳಿದ ಕಟ್ಟಡವನ್ನು ಸಂರಕ್ಷಿಸಿ ಜೊತೆಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕಗಳು ಎನ್ ಹೆಚ್ ಕಾಮಗಾರಿಯಿಂದಾಗಿ ಸ್ಥಗಿತವಾಗಿದೆ. ಕೂಡಲೇ ಸರಿಪಡಿಸಿ ನಂತರ ಎನ್‍ಹೆಚ್ ಕಾಮಗಾರಿಯನ್ನು ಮಾಡಿ ಎಂದು ಸೂಚಿಸಿದರು. ಸರ್ಕಾರಿ ಎಸ್‍ವಿಕೆ ಕಾಲೇಜು ಹೆಣ್ಣು ಮಕ್ಕಳು ಸುರಕ್ಷಿತವಾಗಿರುವುದರಿಂದ ಇಲ್ಲಿರುವ ಕಟ್ಟಗಳನ್ನು ರಕ್ಷಣೆ ಮಾಡುವುದಾಗಿ ಉಪನ್ಯಾಸಕರಿಗೆ ತಿಳಿಸಿದರು. ಇತ್ತೀಚೆಗೆ 5 ಕೊಠಡಿಗಳಿಗೆ ಗುದ್ದಲಿಪೂಜೆ ಮಾಡಲಾಗಿದೆ. ಇನ್ನೂ ಹೆಚ್ಚುವರಿಯಾಗಿ ಶಾಸಕರ ನಿಧಿಯಿಂದ ಹಣ ಬಿಡುಗಡೆ ಮಾಡಿ ಇನ್ನೂ ಮೂರು ಹೆಚ್ಚುವರಿ ಕೊಠಡಿಗಳನ್ನು ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಶಾಂತರಾಜು, ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಮಲ್ಲಿಕಾರ್ಜುನ, ಜಿ.ಎಂ ಸುರೇಶ್, ಮಾಜಿ ಸದಸ್ಯ ಮುಡಿಗುಂಡ ಶಾಂತರಾಜು, ತಾ.ಪಂ ಮಾಜಿ ಉಪಾಧ್ಯಕ್ಷ ಬಸವಣ್ಣ, ಕಾಲೇಜಿನ ಪ್ರಾಂಶುಪಾಲರಾದ ಉಷಾರಾಣಿ, ಉಪಪ್ರಾಂಶುಪಾಲ ರಾಜಪ್ಪ, ಮುಖಂಡರಾದ ರಾಜೇಂದ್ರ, ಬಸ್ತೀಪುರ ರವಿ, ಹಾಗೂ ಉಪನ್ಯಾಸಕರುಗಳು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: