ಕರ್ನಾಟಕ

ಗಂಡನನ್ನೇ ಕೊಂದ ಹೆಂಡತಿ, ಮಕ್ಕಳು

ದಾವಣಗೆರೆ,ಜೂ.29-ಗಂಡ ಸಾಲಕ್ಕಾಗಿ ಜಮೀನು ಮಾರುತ್ತಾನೆ ಎಂದು ಮಕ್ಕಳೊಂದಿಗೆ ಸೇರಿ ಗಂಡನನ್ನೇ ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರತ್ನಮ್ಮ, ದೇವರಾಜ, ರವಿ ಬಂಧಿತ ಆರೋಪಿಗಳು. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸಾರಥಿ ಹೊಸೂರು ಗ್ರಾಮದ ರುದ್ರಪ್ಪ ಕಳೆದ ಎರಡು ತಿಂಗಳ ಹಿಂದೆ ಅನುಮಾನಸ್ಪದವಾಗಿ ಮೃತಪಟ್ಟಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಚನ್ನಗಿರಿ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು.

ರುದ್ರಪ್ಪನನ್ನು ಪತ್ನಿ ರತ್ನಮ್ಮ, ಮಕ್ಕಳಾದ ದೇವರಾಜ, ರವಿ ಕೊಲೆ ಮಾಡಿದ್ದಾರೆ ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ. (ವರದಿ-ಎಸ್.ಎನ್,ಎಂ.ಎನ್)

Leave a Reply

comments

Related Articles

error: