ಕರ್ನಾಟಕ

ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಮೂಲಕ ಪ್ರೋತ್ಸಾಹಿಸಿ :ಸಿ.ಅಶೋಕ್

ರಾಜ್ಯ(ಮಂಡ್ಯ) ಜೂ29:- ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಜಿಪಂ ಸದಸ್ಯ ಸಿ.ಅಶೋಕ್ ಹೇಳಿದರು.
ಪಾಂಡವಪುರ ಪಟ್ಟಣದ ಹೇಮಾವತಿ ಬಡಾವಣೆಯಲ್ಲಿ ಸಂಸದ ಸಿ.ಎಸ್.ಪುಟ್ಟರಾಜು ಅವರ 34ನೇ ವಾರ್ಷಿಕೋತ್ಸವ ಹಾಗೂ ಜಿಪಂ ಸದಸ್ಯ ಸಿ.ಅಶೋಕ್ ಅವರ 39ನೇ ಜನ್ಮ ದಿನದ ಅಂಗವಾಗಿ ತಾಲೂಕಿನ ಶಂಭೂವಿನಹಳ್ಳಿ ಗ್ರಾಮದ ಲಕ್ಷ್ಮೀದೇವಿ ಕ್ರಿಕೆಟರ್ಸ್ ಬಳಗ ಹಾಗೂ ಸಿಎಸ್‍ಪಿ ಬಾಯ್ಸ್ ಮೂರು ದಿನಗಳ ಕಾಲ ಆಯೋಜಿಸಿದ್ದ ಮುಕ್ತ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ವಿಜೇತ ತಂಡಗಳಿಗೆ ಬಹುಮಾನ ನೀಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ, ಪಟ್ಟಣ, ನಗರ ಪ್ರದೇಶದ ಯುವಕ-ಯುವತಿಯರು ಮೊಬೈಲ್, ಇಂಟರ್ನೆಟ್, ವಾಟ್ಸ್ ಆ್ಯಪ್, ಫೇಸ್‍ ಬುಕ್ ನಲ್ಲಿ ಹೆಚ್ಚು ತೊಡಗಿಸಿಕೊಂಡು ಯಂತ್ರ ಮಾನವರಾಗುತ್ತಿದ್ದಾರೆ. ಇದರಿಂದ ಯುವಜನಾಂಗವು ಮಾನಸಿಕ ಸ್ಥೈರ್ಯ ಕಳೆದುಕೊಂಡು ಮಾನಸಿಕವಾಗಿ ಕುಗ್ಗುತ್ತಿದ್ದಾ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಸ್ತುತ ದಿನಗಳಲ್ಲಿ ಕ್ರೀಡಾ ಕ್ಷೇತ್ರವು ಸಾಕಷ್ಟು ಉತ್ತಮವಾಗಿದ್ದು ಕ್ರೀಡೆಗಳಿಂದ ಕ್ರೀಡಾಪಟುಗಳು ಉಜ್ವಲವಾದ ಭವಿಷ್ಯರೂಪಿಸಿಕೊಳ್ಳುವುದರ ಜತೆಗೆ ದೈಹಿಕ ಹಾಗೂ ಮಾನಸಿಕವಾಗಿಯೂ ಸದೃಢರಾಗಬಹುದು. ಹಾಗಾಗಿ ಯುವಜನಾಂಗ ಹೆಚ್ಚು ಕ್ರೀಡೆಗೆ ಆದ್ಯತೆ ನೀಡಬೇಕು, ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಗುರುಸ್ವಾಮಿ ಮಾತನಾಡಿ, ಗ್ರಾಮೀಣ ಪ್ರದೇಶದ ಯುವಕರು ಗ್ರಾಮೀಣ ಕ್ರೀಡೆಗಳನ್ನು ಉಳಿಸಿಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು, ಗ್ರಾಮೀಣ ಪ್ರದೇಶದಲ್ಲಿ ಕಬ್ಬಡಿ, ಕ್ರಿಕೆಟ್ ಪಂದ್ಯಾವಳಿಗಳನ್ನು ಯುವಕರು ಆಯೋಜನೆ ಮಾಡುವ ಮೂಲಕ ಕ್ರೀಡೆಗೆ ಹೆಚ್ಚು ಹೊತ್ತು ನೀಡುತ್ತಿರುವುದು ಸಾಗತಾರ್ಹ. ಆದರೆ, ಇತ್ತೀಚಿನ ದಿನಗಳಲ್ಲಿ ಯುವಕರು ಕ್ರಿಕೆಟ್ ಬೆಟ್ಟಿಂಗ್‍ನಂತ ಕೃತ್ಯಕ್ಕೆ ಒಳಗಾಗಿ ಸಾಲಮಾಡಿಕೊಂಡು ಎಷ್ಟೋ ಯುವಕರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಆದ್ದರಿಂದ ಯುವಕರು ಸಾಧ್ಯವಾದಷ್ಟು ಕ್ರಿಕೆಟ್ ಬೆಟ್ಟಿಂಗ್‍ನಿಂದ ದೂರವಿರಿ ಎಂದು ತಿಳಿಸಿದರು. ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೆ.ಎಂ.ದೊಡ್ಡಿ ತಂಡ ಪ್ರಥಮ, ಪಾಂಡವಪುರ ಆರ್‍ಡಿಎಕ್ಸ್ ತಂಡ ದ್ವಿತೀಯ ಹಾಗೂ ಶಂಭೂವಿನಹಳ್ಳಿ ತಂಡ ತೃತೀಯ ಸ್ಥಾನ ಪಡೆಯಿತು.
ಈ ಸಂದರ್ಭದಲ್ಲಿ ತಾಪಂ ಸದಸ್ಯ ಅಲ್ಪಳ್ಳಿಗೋವಿಂದಯ್ಯ, ಚಿನಕುರಳಿ ಗ್ರಾಪಂ ಸದಸ್ಯ ಸಿ.ಎ.ಲೋಕೇಶ್, ಡೈರಿ ಮಾಜಿ ಅಧ್ಯಕ್ಷ ರಮೇಶ್, ಪರಮೇಶ್, ಜೆಡಿಎಸ್ ಯುವ ಮುಖಂಡರಾದ ಅಶೋಕ್, ಲೈಸಿಯಂ ಪ್ರಶಾಂತ್, ಆಯೋಜಕರಾದ ಸೋಮು, ಲಕ್ಷ್ಮೀಶ ಸೇರಿದಂತೆ ಹಲವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: