ಮೈಸೂರು

ದ್ವಿಚಕ್ರ ವಾಹನ ಕಳ್ಳನ ಬಂಧನ: ಎರಡು ಬೈಕ್ ವಶ

ಮೈಸೂರು, ಜೂ.೨೯: ದ್ವಿಚಕ್ರ ವಾಹನ ಕಳ್ಳನನ್ನು ಬಂಧಿಸಿರುವ ಮೇಟಗಳ್ಳಿ ಪೊಲೀಸರು ೧,೫೦,೦೦೦ ರೂ ಮೌಲ್ಯದ ೨ ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಸ್ಟಾನ್ಲಿ (೨೨) ಬಂಧಿತ ಆರೋಪಿ. ಮೇಟಗಳ್ಳಿ ಠಾಣಾ ವ್ಯಾಪ್ತಿಯ ಬಸವನಗುಡಿ ವೃತ್ತದ ಬಳಿ ಗಸ್ತಿನಲ್ಲಿದ್ದಾಗ ನಂಬರ್ ಪ್ಲೇಟ್ ಇಲ್ಲದೇ ಕೆಟಿಎಮ್ ಡ್ಯೂಕ್ ಬೈಕನ್ನು ನಿಲ್ಲಿಸಿಕೊಂಡು ಅನುಮಾನಾಸ್ಪದವಾಗಿ ನಿಂತಿದ್ದ ಸ್ಟ್ಯಾನ್ಲಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ ಕುವೆಂಪುನಗರ ಠಾಣಾ ವ್ಯಾಪ್ತಿಯ ಹಾಸ್ಟೆಲ್ ಬಳಿ ಹಾಗೂ ಜೆಎಸ್‌ಎಸ್ ಆಸ್ಪತ್ರೆ ಬಳಿ ಬಜಾಜ್ ಪಲ್ಸರ್ ಬೈಕನ್ನು ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈತನಿಂದ ೧,೫೦,೦೦೦ ಮೌಲ್ಯದ ಕೆಟಿಎಮ್ ಡ್ಯೂಕ್ ಬೈಕ್ ಮತ್ತು ಬಜಾಜ್ ಪಲ್ಸರ್ ಬೈಕ್ ವಶಪಡಿಸಿಕೊಂಡಿದ್ದಾರೆ.
ಈತ ಈ ಹಿಂದೆ ಸಹ ವಿಜಯನಗರ, ಜಯಲಕ್ಷ್ಮೀಪುರಂ, ಸರಸ್ವತಿಪುರಂ ಪೊಲೀಸ್ ಠಾಣೆಗಳಲ್ಲಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟು, ಜಾಮೀನಿನ ಮೇಲೆ ಹೊರ ಬಂದು ಮತ್ತೆ ದ್ವಿಚಕ್ರ ವಾಹನ ಕಳ್ಳತನ ಮಾಡಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. (ವರದಿ ಬಿ.ಎಂ)

Leave a Reply

comments

Related Articles

error: