ಸುದ್ದಿ ಸಂಕ್ಷಿಪ್ತ

ಸರಕು ಮತ್ತು ಸೇವಾ ತೆರಿಗೆ ; ಅರಿವು ಕಾರ್ಯಕ್ರಮ

ಸರಕು ಮತ್ತು ಸೇವಾ ತೆರಿಗೆ  ಹಾಗೂ ಎನ್.ಎಸ್.ಐ.ಸಿ ಸಾಲ ಸೌಲಭ್ಯ ಕೇಂದ್ರದ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಅ.28ರಂದು ಬೆಳಿಗ್ಗೆ 10:30ಕ್ಕೆ ಮೈಸೂರಿನ ಕೈಗಾರಿಕೆಗಳ ಸಂಘದಲ್ಲಿ ಆಯೋಜಿಸಲಾಗಿದೆ. ಬೆಂಗಳೂರಿನ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ, ಭಾರತ ಸರ್ಕಾರದ ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮ, ದಕ್ಷಿಣ ವಲಯ ಕೇಂದ್ರ ಅಬಕಾರಿ, ಸುಂಕ ಹಾಗೂ ಸೇವಾ ತೆರಿಗೆ ಇಲಾಖೆ, ಜಿಲ್ಲಾ ಕೈಗಾಋಇಕೆಗಳ ಸಂಘ ಸಂಯುಕ್ತವಾಗಿ ಸಣ್ಣ ಕೈಗಾರಿಕೆಗಳಿಗೆ ಆಗತ್ಯತೆ ಆಧಾರಿತ ಸಾಲ ಸೌಲಭ್ಯ ಪೂರೈಕೆಗಾಗಿ ಭಾರತ ಸರ್ಕಾರದ ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮದ ಸಾಲ ಸೌಲಭ್ಯದ ಬಗ್ಗೆ ಚರ್ಚಿಸಲಾಗುವುದು. ಮೈಸೂರಿನ ಕೇಂದ್ರ ಅಬಕಾರಿ ಸುಂಕ ಹಾಗೂ ಸೇವಾ ತೆರಿಗೆ ಇಲಾಖೆಯ ಮುಖ್ಯ ಆಯುಕ್ತ ಎನ್.ಸಿ.ಐ.ಸಿ. ದಕ್ಷಿಣ ವಲಯ ಪ್ರಧಾನ ವ್ಯವಸ್ಥಾಪಕ ಮತ್ತು ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಲ್ಛಿಸುವ ಆಸಕ್ತರು ನೂರು ರೂ. ನೋಂದಾಣಿ ಶುಲ್ಕದೊಂದಿಗೆ ಮೈಸೂರು ಕೈಗಾರಿಕೆಗಳ ಸಂಘ, ಕೆ.ಐ.ಎ.ಡಿ.ಬಿ., ಕೆ.ಆರ್.ಎಸ್. ರಸ್ತೆ, ಮೈಸೂರು. ಪೋನ್ ನಂ. 9845297550 ಅನ್ನು ಸಂಪರ್ಕಿಸಬಹುದು. ಈ ಮೇಲ್ – [email protected] ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: