ದೇಶಪ್ರಮುಖ ಸುದ್ದಿ

ಪೆಟ್ರೋಲ್, ರಿಯಲ್ ಎಸ್ಟೇಟ್ ವ್ಯವಹಾರವೂ ಜಿಎಸ್‍ಟಿ ವ್ಯಾಪ್ತಿಗೆ : ಅರುಣ್ ಜೇಟ್ಲಿ

ನವದೆಹಲಿ, ಜೂ. 29 : ಮುಂದಿನ ದಿನಗಳಲ್ಲಿ ಪೆಟ್ರೋಲ್, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ರಿಯಲ್ ಎಸ್ಟೇಟ್ ವ್ಯವಹಾರವನ್ನೂ ಜಿಎಸ್‍ಟಿ ವ್ಯಾಪ್ತಿಗೆ ಸೇರಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಪ್ರಸ್ತುತ ಪೆಟ್ರೋಲ್ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರವನ್ನು ಜಿಎಸ್‍ಟಿ ವ್ಯಾಪ್ತಿಗೆ ಸೇರಿಸದೇ ಇರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಈಗಾಗಲೇ ಆಕ್ಷೇಪಗಳು ಕೇಳಿಬಂದಿದ್ದವು. ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಜೇಟ್ಲಿ ಅವರು ಉತ್ತರಿಸುತ್ತಿದ್ದರು.

ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಕೇಂದ್ರ ವಿತ್ತ ಸಚಿವರು, ಆರಂಭದಲ್ಲಿ ಜಿಎಸ್‍ಟಿಯಿಂದಾಗಿ ಸ್ವಲ್ಪ ಗೊಂದಲ ಉಂಟಾಗಬಹುದಷ್ಟೆ. ಆದರೆ ದೀರ್ಘಕಾಲಿಕವಾಗಿ ಜಿಎಸ್‍ಟಿಯಿಂದ ದೇಶದ ಜನರಿಗೆ ಲಾಭವಾಗಲಿದೆ. ಯಾವುದೇ ತೆರಿಗೆ ವ್ಯವಸ್ಥೆ ಆರಂಭಿಕ ಹಂತದಲ್ಲಿ ಸ್ಥಿರತೆ ಕಂಡುಕೊಳ್ಳಲು ಸಾಧ್ಯವಿಲ್ಲ. ಹಾಗೆಯೇ ಜಿಎಸ್‍ಟಿ ಕೂಡ ಸ್ವಲ್ಪ ಸಮಯದ ನಂತರ ಸ್ಥಿರತೆ ಒದಗಿಸಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಸರಕು ಮತ್ತು ಸೇವೆಗಳನ್ನು ನಾಲ್ಕು ಸ್ಲ್ಯಾಬ್‍ಗಳಲ್ಲಿ ವರ್ಗೀಕರಿಸಲಾಗಿದೆ.  ಶೇ. 5, 12, 18 ಹಾಗೂ 28 – ಹೀಗೆ ವಿವಿಧ ಸರಕು ಮತ್ತು ಸೇವೆಗಳಿಗೆ ಶೇಕಡಾವಾರು ತೆರಿಗೆ ವಿಧಿಸಲಾಗುವುದು. ಹಣದುಬ್ಬರ ನಿಯಂತ್ರಿಸಲು ಈ ವರ್ಗೀಕರಣ ಮಾಡುವುದು ಅನಿವಾರ್ಯವಾಗಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ.
-ಎನ್.ಬಿ.

Leave a Reply

comments

Related Articles

error: