ಕರ್ನಾಟಕ

ಚಾಮರಾಜೇಶ್ವರ ದೇವಾಲಯದಲ್ಲಿ ಹುಂಡಿ ಹಣ ಕಳುವು ಮಾಡಿದ್ದ ಕಳ್ಳನ ಬಂಧನ

ರಾಜ್ಯ(ಚಾಮರಾಜನಗರ)ಜೂ.29:- ಚಾಮರಾಜೇಶ್ವರ ದೇವಾಲಯದಲ್ಲಿ ಹುಂಡಿ ಹಣ ಕಳುವು ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕೋಟಂಬಳ್ಳಿ ಗ್ರಾಮದ ನಾಗೇಶ್ ಎಂದು ಗುರುತಿಸಲಾಗಿದೆ. ಈತ  ಜೂ.20ರಂದು ಚಾಮರಾಜೇಶ್ವರ ಸ್ವಾಮಿ ಸನ್ನಿಧಿಯಲ್ಲಿರುವ 2 ಹುಂಡಿಯ ಹಣ ಕಳವು ಮಾಡಿದ್ದ. ಬಂಧಿತನಿಂದ 25,000 ರೂ ಅನ್ನು ವಶಪಡಿಸಿಕೊಳ್ಳಲಾಗಿದೆ. ಡಿವೈಸ್ಪಿ ಗಂಗಾಧರ ಸ್ವಾಮಿ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಇನ್ಸಪೆಕ್ಟರ್ ಆನಂದ್ ಗೌಡ, ಪಟ್ಟಣ ಠಾಣಾ ಸಬ್ ಇನ್ಸ್ಪೆಕ್ಟರ್ ಸಾಗರ್,ದಪೇದಾರ್ ಶಾಂತರಾಜು ಮತ್ತು ಕೃಷ್ಣಮೂರ್ತಿ ಚಾಮರಾಜನಗರ ತಾಲೂಕಿನ ಕೋಟಂಬಳ್ಳಿ ಗ್ರಾಮದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. (ಆರ್.ವಿ.ಎಸ್,ಎಸ್.ಎಚ್)

Leave a Reply

comments

Related Articles

error: