ಸುದ್ದಿ ಸಂಕ್ಷಿಪ್ತ

ಮಾನಸಧಾರ ಕೇಂದ್ರದಲ್ಲಿ ಹಲವು ಸೌಲಭ್ಯ

ಮಡಿಕೇರಿ ಜೂ.29:-ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ಆಸ್ಪತ್ರೆ ಹಾಗೂ ಗ್ರೀನ್ ಡಾಟ್ ಟ್ರಸ್ಟ್(ರಿ) ಅವರ ಸಂಯುಕ್ತ ಆಶ್ರಯದಲ್ಲಿ ಮಾನಸಿಕ ರೋಗಿಗಳಿಗಾಗಿ ಹಗಲು ಆರೈಕೆ ಕೇಂದ್ರ ಮಾನಸಧಾರ ಕೇಂದ್ರದಲ್ಲಿ ನುರಿತ ಮಾನಸಿಕ ವೈದ್ಯರಿಂದ ಮಾನಸಿಕ ರೋಗಿಗಳಿಗೆ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಮನೋ ಚಿಕಿತ್ಸಕರಿಂದ ಮಾನಸಿಕ ರೋಗಿಗಳಿಗೆ ಹಾಗೂ ಕುಟುಂಬದವರಿಗೆ ಮೂರು ಹಂತದಲ್ಲಿ ಆಪ್ತ ಸಮಾಲೋಚನೆ ನಡೆಸಿ ಧೈರ್ಯ ಮತ್ತು ಆತ್ಮವಿಶ್ವಾಸ ಮೂಡಿಸಿ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಲಾಗುತ್ತದೆ. ಉಚಿತವಾಗಿ ವೃತ್ತಿಪರ ತರಬೇತಿಗಳಾದ ಚಿತ್ರಕಲೆ, ಪೈಲ್ ತಯಾರಿಕೆ, ಪೇಪರ್ ಕವರ್ ತಯಾರಿಕೆ, ಗೊಂಬೆ ತಯಾರಿಕೆ, ಬುಟ್ಟಿ ಹೆಣೆಯುವುದು, ಮೇಣದ ಬತ್ತಿ ತಯಾರಿಸುವುದು, ಕಸೂತಿ, ಕರಕುಶಲ  ವಸ್ತುಗಳನ್ನು ತಯಾರಿಸುವ ವಿಧಾನಗಳನ್ನು  ಹೇಳಿಕೊಡಲಾಗುತ್ತದೆ. ಕೇಂದ್ರದಲ್ಲಿ ಭಜನೆ, ಯೋಗ, ಪ್ರಾಣಯಾಮ, ಆಧ್ಯಾತ್ಮ, ಮನೋರಂಜನೆ, ಆಟ ಇನ್ನಿತರ ಚಟುವಟಿಕೆಗಳನ್ನು ಹೇಳಿ ಕೊಡಲಾಗುತ್ತದೆ. ನೋಂದಣಿಯಾದ ಮಾನಸಿಕ ರೋಗಿಗಳಿಗೆ ಉಚಿತವಾಗಿ ಮಧ್ಯಾಹ್ನದ ಊಟ ಮತ್ತು ವಿಶ್ರಾಂತಿ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ 9731065412, 9663693563, 9686170003 ನ್ನು ಸಂಪರ್ಕಿಸಬಹುದು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: