ಮೈಸೂರು

ಕಾಮಾಕ್ಷಿ ಆಸ್ಪತ್ರೆ ಸೇವೆಯನ್ನು ಇತರರು ಅನುಸರಿಸಲಿ: ಡಾ.ಎಚ್.ಸಿ. ಮಹದೇವಪ್ಪ

ಮೈಸೂರು, ಜೂನ್.30: ಸೇವೆಯ ಮೂಲಕ  ಜನರಲ್ಲಿ ನಂಬಿಕೆಯನ್ನು ಉಳಿಸಿಕೊಂಡಿರುವ ಕಾಮಾಕ್ಷಿ ಆಸ್ಪತ್ರೆಯನ್ನು  ಇತರೆ ಆಸ್ಪತ್ರೆಗಳು ಅನುಸರಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ತಿಳಿಸಿದರು.

ನಗರದ ಕುವೆಂಪುನಗರದಲ್ಲಿರುವ ಕಾಮಾಕ್ಷಿ ಆಸ್ಪತ್ರೆಯ 44 ನೇ ವಾರ್ಷಿಕೋತ್ಸವ ಮತ್ತು ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಮಾನ್ಯವಾಗಿ ಕಾರ್ಖಾನೆ ನೌಕರಿಗೆ ಬೋನಸ್‍ ನೀಡಲಾಗುತ್ತದೆ. ಆದರೆ ಈ ಆಸ್ಪತ್ರೆ ತನ್ನ ನೌಕರಿಗೆ ಬೋನಸ್‍ ನೀಡುವ ಏಕೈಕ ಆಸ್ಪತ್ರೆಯಾಗಿದೆ. ಅಲ್ಲದೇ ಕಡಿಮೆ ಖರ್ಚಿನ  ಹೆಚ್ಚು ಸೇವೆ ಸಲ್ಲಿಸುತ್ತಾ ಬಂದಿದೆ ಎಂದರು. ಖಾಸಗಿ ವೈದ್ಯಕೀಯ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ, ಮತ್ತೊಮ್ಮೆ ಪರಿಶೀಲನೆಗೆ ಅಧ್ಯಯನ ಸಮಿತಿಯ ಮುಂದಿಡಲಾಗಿದೆ ಎಂದು ಹೇಳಿದರು. ಇದೇ ಸಂದರ್ಭ ಆಸ್ಪತ್ರೆಯ ನರ್ಸ್‍ಗಳಾದ ಸುನಂದಾ ಹೆಗ್ಡೆ, ಭಾರತಿ ಮತ್ತು ಎಲ್ಸಿ ಅವರನ್ನು ಸನ್ಮಾನಿಸಲಾಯಿತು. ನೌಕರರ ಪ್ರತಿಭಾವಂತ ಮಕ್ಕಳನ್ನು  ಪುರಸ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಟ್ರಸ್ಟಿ ಎಂ.ವಿನೋದ್ ರಾವ್‍, ಮ್ಯಾನೇಜಿಂಗ್‍ ಟ್ರಸ್ಟಿ ಎಂ.ಮಹೇಶ್ ಶೆಣೈ, ಆಡಳಿತಾಧಿಕಾರಿ ಡಾ.ಕೆ.ಆರ್‍.ಕಾಮತ್‍ , ಅಶೋಕ್‍ ಶಣೈ, ವಿಶ್ವನಾಥ್‍ ಮತ್ತಿತರರು ಭಾಗವಹಿಸಿದ್ದರು. (ಪಿ.ಜೆ)

 

Leave a Reply

comments

Related Articles

error: