ದೇಶಪ್ರಮುಖ ಸುದ್ದಿ

ಜಾರ್ಖಾಂಡ್‍ನಲ್ಲಿ ಗೋರಕ್ಷಣೆ ನೆಪದಲ್ಲಿ ಮತ್ತೊಂದು ಜೀವ ತೆಗೆದ ಹಂತರಕು

ರಾಂಚಿ, ಜೂ.30 : ಗೋ ರಕ್ಷಣೆ ನೆಪದಲ್ಲಿ ದೇಶಾದ್ಯಂತ ಮನುಷ್ಯರ ಮೇಲೆ ಅಮಾನವೀಯ ದಾಳಿಗಳು ಹೆಚ್ಚಾಗುತ್ತಿದ್ದು, ಜಾರ್ಖಂಡ್‍ನಲ್ಲಿ ಗೋರಕ್ಷಣೆ ನೆಪದಲ್ಲಿ ಮತ್ತೊಂದು ಹತ್ಯೆ ನಡೆದಿದೆ.

ಗುರುವಾರ ದನದ ಮಾಂಸ ಸಾಗಿಸುತ್ತಿದ್ದಾರೆಂಬ ಅನುಮಾನದ ಮೇಲೆ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಚೂರಿಯಿಂದ ಇರಿದು ಹತ್ಯೆ ಮಾಡಲಾಗಿದೆ. ಜಾರ್ಖಾಂಡ್‍ ರಾಜ್ಯದ ರಾಮಗಢ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸುಮಾರು 100 ಮಂದಿ ದುಷ್ಕರ್ಮಿಗಳ ತಂಡವು ಹತ್ಯೆಗೀಡಾದ ಸಂತ್ರಸ್ತನನ್ನು ಉದ್ಯಮಿ ಅಲಿಮುದ್ದೀನ್ ಅಕಾ ಅಸ್ಗರ್ ಅಲಿ (45) ಎಂದು ಗುರ್ತಿಸಲಾಗಿದೆ.

ಅಲಿಮುದ್ದೀನ್ ಅವರು ವಾಹನದಲ್ಲಿ ದನದ ಮಾಂಸ ಸಾಗಣೆ ಮಾಡುತ್ತಿದ್ದರು ಎಂದು ಶಂಕಿಸಿದ್ದ ದುಷ್ಕರ್ಮಿಗಳು ವಾಹನವನ್ನು ತಡೆದು ಚಾಕುವಿನಿಂದ ಇರಿದಿದ್ದಾರೆ. ಜೊತೆಗೆ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸಂತ್ರಸ್ತ ಅಲಿಮುದ್ದೀನ್‍ ಅವರನ್ನು ದುಷ್ಕರ್ಮಿಗಳಿಂದ ಬಿಡಿಸಿಕೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅಲಿಮುದ್ದೀನ್ ಸಾವನ್ನಪ್ಪಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ನಿನ್ನೆಯಷ್ಟೆ ಪ್ರಧಾನಿ ಮೋದಿಯವರು ಗೋವುಗಳ ರಕ್ಷಣೆ ನೆಪದಲ್ಲಿ ಮನುಷ್ಯರ ಹತ್ಯೆಯನ್ನು ಸಹಿಸುವುದಿಲ್ಲ ಎಂದು ಹೇಳಿಕೆ ನೀಡಿದರಾದರೂ, ಈ ಅಮಾನವೀಯ ದಾಳಿ ನಡೆದಿದೆ.  ಕೆಲ ದಿನಗಳ ಹಿಂದಷ್ಟೇ ಗೋಹತ್ಯೆ ಸಂಶಯದಿಂದ 200 ಮಂದಿ ಗೋರಕ್ಷಕರ ತಂಡವು ಗಿರಿದಿ ಜಿಲ್ಲೆಯ ಬರಿಯಾಬಾದ್ ಗ್ರಾಮದ ಉಸ್ಮಾನ್ ಅನ್ಸಾರಿಯವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಅವರ ಮನೆಗೆ ಬೆಂಕಿ ಹಚ್ಚಿತ್ತು.

-ಎನ್.ಬಿ.

Leave a Reply

comments

Related Articles

error: