ದೇಶಪ್ರಮುಖ ಸುದ್ದಿ

ಕೇರಳದ ಕೊಲೆ ಸಂಸ್ಕೃತಿ ತಂದರೆ ಸಹಿಸುವುದಿಲ್ಲ : ವೇಣುಗೋಪಾಲ್‍ಗೆ ಸುರೇಶ್ ಕುಮಾರ್ ಎಚ್ಚರಿಕೆ

ಬೆಂಗಳೂರು, ಜೂ.30 : ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿ ಎಐಸಿಸಿಯಿಂದ ನೇಮಕವಾಗಿರುವ ಕೆ.ಸಿ.ವೇಣುಗೋಪಾಲ್ ಅವರು ಕೇರಳದ ಕೊಲೆ ಸಂಸ್ಕೃತಿಯನ್ನು ಕರ್ನಾಟಕಕ್ಕೆ ತರುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಹಾಗೂ ಮಾಜಿ ಕಾನೂನು ಸಚಿವ ಎಸ್.ಸುರೇಶ್ ಕುಮಾರ್ ಗಂಭೀರವಾಗಿ ಆಪಾದಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿ​ ನಡೆಸಿ ಮಾತನಾಡಿರುವ ಸುರೇಶ್ ಕುಮಾರ್ ಅವರು, “ಕರ್ನಾಕಟದ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘ​ಟನೆಗಾಗಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕೇರಳ ಮಾದರಿ ಅನುಸರಿಸುವಂತೆ ವೇಣುಗೋಪಾಲ್ ಸಲಹೆ ನೀಡಿದ್ದಾರೆ. ಕೇರಳದಲ್ಲಿ ರಾಜಕೀಯ ಹತ್ಯೆ, ಹಿಂಸೆ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದ್ದರಿಂದ ವೇಣು ಅವರು ತಮ್ಮ ರಾಜ್ಯದ ಕೊಲೆ ಸಂಸ್ಕೃತಿಯನ್ನು ಕರ್ನಾಟಕಕ್ಕೆ ತರಬಾರದು” ಎಂದು ಮನವಿ ಮಾಡುತ್ತಿದ್ದೇನೆ ಎಂದರು.

ವೇಣುಗೋಪಾಲ್ ಅವರು ಚುನಾವಣೆಗಾಗಿ ಭಾರೀ ಉತ್ಸಾಹ ತೋರಿಸುತ್ತಿದ್ದಾರೆ. ವಿದ್ಯಾರ್ಥಿ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಪದಾಧಿಕಾರಗಳ ಸಭೆಯಲ್ಲಿ ಎಬಿವಿಪಿ ಮತ್ತು ಆರ್‌ಎಸ್‌ಎಸ್ ಪ್ರೇರಿತ ಕಾಲೇಜುಗಳ ಪಟ್ಟಿ ಕೇಳಿದ್ದಾರೆ ಎಂಬ ಮಾಹಿತಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಆ ಕಾಲೇಜುಗಳ ಪ್ರಾಂಶು​ಪಾಲರ ಮಾಹಿತಿಯನ್ನೂ ಸಂಗ್ರಹಿಸಲು ಸೂಚಿಸಿದ್ದಾರೆ. ಇದಕ್ಕೆ ಕೇರಳವನ್ನು ಮಾದರಿಯಾಗಿ ಮಾಡುವಂತೆ​ಯೂ ಹೇಳಿದ್ದಾರೆ. ಇದನ್ನು ನಾನು ಸಹಿಸುವುದಿಲ್ಲ. ಅವರ ಉತ್ಸಾಹ ಮಿತಿಮೀರುತ್ತಿದ್ದು ಮುಂದೆ ಅನಾಹುತವಾಗುವ ಲಕ್ಷಣಗಳಿವೆ ಎಂದು ಕಿಡಿಕಾರಿದರು.

-ಎನ್.ಬಿ.

Leave a Reply

comments

Related Articles

error: