ಮನರಂಜನೆ

‘ದಂಡುಪಾಳ್ಯ-2’ ಜುಲೈ 14 ರಂದು ತೆರೆಗೆ

ಬೆಂಗಳೂರು: ದಂಡುಪಾಳ್ಯ ಭಾಗ-2 ಚಿತ್ರೀಕರಣ ಮುಗಿಸಿ, ಬಹು ದಿನಗಳ ನಂತರ ತೆರೆಗೆ ಬರಲು ಸಿದ್ಧಗೊಂಡಿದೆ .

‘ದಂಡುಪಾಳ್ಯ-2’ ಟ್ರೈಲರ್ ಗಳ ಮೂಲಕವೇ ಅಂತರ್ಜಾಲತದಲ್ಲಿ ಸಿಕ್ಕಾಪಟ್ಟೆ  ಸದ್ದು ಮಾಡುತ್ತಿದೆ. ಅದೇ ಕುತೂಹಲ, ಕ್ರೌರ್ಯ, ಭಯಾನಕ, ರೋಚಕಗಳಿಂದ ಕೂಡಿದ ಪೂಜಾ ಗಾಂಧಿ ಮತ್ತು ಗ್ಯಾಂಗ್ ಮತ್ತೆ ತೆರೆಮೇಲೆ ಬರಲು ಸಿದ್ಧವಾಗಿದ್ದಾರೆ. ಇದಕ್ಕೆ ‘ದಂಡುಪಾಳ್ಯ’ ಮೊದಲ ಭಾಗವನ್ನು ನಿರ್ದೇಶನ ಮಾಡಿದ್ದ ಶ್ರೀನಿವಾಸ್ ರಾಜು ಅವರೇ ಮುಂದುವರೆದ ಭಾಗಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

‘ದಂಡುಪಾಳ್ಯ-2’ ಚಿತ್ರದ ಬಿಡುಗಡೆ ದಿನಾಂಕ ನಿಗದಿಯಾಗಿದ್ದು, ಜುಲೈ 14 ರಂದು ಥಿಯೇಟರ್ ಗೆ  ಬಿಡಲು ಯೋಚಿಸಿದ್ದಾರಂತೆ. ನಾಟಿಕೋಳಿ ಚಿತ್ರದ ಖ್ಯಾತಿಯ ವೆಂಕಟ್ ನಿರ್ಮಾಣದಲ್ಲಿ,  ಅರ್ಜುನ್ ಜನ್ಯ  ಹಿನ್ನೆಲೆ ಸಂಗೀತದಲ್ಲಿ ಚಿತ್ರ ಸಿದ್ಧಗೊಂಡಿದೆ. ‘ದಂಡುಪಾಳ್ಯ’ ಗ್ಯಾಂಗ್ ಗೆ ಹೊಸದಾಗಿ  ಗಂಡ-ಹೆಂಡತಿ ಚಿತ್ರದ ನಟಿ ಸಂಜನಾ ಸೇರಿಕೊಂಡಿದ್ದಾರೆ. ಜೊತೆಗೆ ನಟಿ ಶೃತಿ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪೂಜಾಗಾಂಧಿ, ಮಕರಂದ್ ದೇಶಪಾಂಡೆ, ರವಿಶಂಕರ್, ರವಿ ಕಾಳೆ ಆರ್ಭಟ ಇಲ್ಲಿಯೂ ಮುಂದುವರೆದಿದ್ದು ದಂಡುಪಾಳ್ಯ’ ಮೊದಲ ಭಾಗದಲ್ಲಿ ಕಾಣಿಸಿಕೊಂಡಿದ್ದ ಬಹುತೇಕ ಕಲಾವಿದರೇ ಇಲ್ಲಿಯೂ ಕಾಣಿಸಿಕೊಂಡಿದ್ದಾರೆ. (ಪಿ.ಜೆ)

Leave a Reply

comments

Related Articles

error: