ಮೈಸೂರು

ರೈತರ ಆಕ್ರೋಶಕ್ಕೆ ಬೆದರಿ ಕಬಿನಿ ಡ್ಯಾಂನ ಅಧಿಕಾರಿಗಳು ನಾಪತ್ತೆ

ಮೈಸೂರು,ಜೂ.30-ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಡ್ಯಾಂನಿಂದ ಖಾಸಗಿ ಕಂಪನಿಗೆ ನೀರು ಬಿಟ್ಟಿದ್ದ ಡ್ಯಾಂನ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ.

ಖಾಸಗಿ ಕಂಪನಿಗೆ ಡ್ಯಾಂನಿಂದ ನೀರು ಹೊರಬಿಟ್ಟಿರುವುದನ್ನು ಖಂಡಿಸಿ ರೈತರು ಇಂದು ಪ್ರತಿಭಟನೆ ನಡೆಸಿದ್ದರು. ರೈತರ ಆಕ್ರೋಶಕ್ಕೆ ಹೆದರಿದ ಅಧಿಕಾರಿಗಳು ಕಬಿನಿ ಕಚೇರಿಯಿಂದ ಎಸ್ಕೇಪ್ ಆಗಿದ್ದಾರೆ.

ಇನ್ನೂ ನೀರು ನಿಲ್ಲಿಸುತ್ತೇನೆ ಎಂದು ಹೇಳಿ ಹೊರಟ ಗೇಟ್ ಆಫೀಸರ್ ನಾಗರಾಜ್ ಕೂಡ ಪರಾರಿಯಾಗಿದ್ದಾರೆ. ಅಲ್ಲದೆ, ಅಧಿಕಾರಿಗಳ ಫೋನ್ ಗಳು ಕೂಡ ಸ್ವಿಚ್ ಆಫ್ ಆಗಿದೆ.

ಖಾಸಗಿ ಕಂಪನಿಗೆ ನೀರು ಹರಿಸುವ ನೆಪದಲ್ಲಿ ತಮಿಳುನಾಡಿಗೆ ನೀರು ಬಿಟ್ಟಿದ್ದು, ನಾಲೆಗಳಿಗೆ ಬದಲಾಗಿ ಜಲಾಶಯಕ್ಕೆ ನೀರು ಹರಿಸಿರುವ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ವರದಿ-ಆರ್.ವಿ, ಎಂ.ಎನ್)

Leave a Reply

comments

Related Articles

error: