ದೇಶಪ್ರಮುಖ ಸುದ್ದಿ

ಸಾಮಾಜಿಕ ವಾತಾವರಣ ಕೆಡಿಸುವವರ ವಿರುದ್ಧ ಒಂದಾಗಿ ಹೋರಾಡಬೇಕು : ಮನಮೋಹನ್ ಸಿಂಗ್

ನವದೆಹಲಿ, ಜೂ.30 : ಧರ್ಮದ ಹೆಸರಿನಲ್ಲಿ ದೇಶದ ಸಾಮಾಜಿಕ ವಾತಾವರಣವನ್ನು ಹಾಳು ಮಾಡಲಾಗುತ್ತಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಇಂದು ನಡೆದ ಈದ್ ಮಿಲಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಸಮಾಜದಲ್ಲಿ ಕೋಮು ಸಾಮರಸ್ಯ ಕಾಪಾಡಿಕೊಳ್ಳುವ ಮೂಲಕ ಒಂದೇ ಕುಟುಂಬದವರಂತೆ ಬದುಕಬೇಕು, ಸಾಮರಸ್ಯ ಹಾಳುಗೆಡವುವವರ ವಿರುದ್ಧ ದೇಶದ ಜನ ಪರಸ್ಪರ ಸಹಕಾರದಿಂದ ಹೋರಾಟ ಮಾಡಬೇಕು. ಭ್ರಾತೃತ್ವ ಭಾವನೆ ಅಳವಡಿಸಿಕೊಳ್ಳುವ ಮೂಲಕ ಸಂವಿಧಾನದಲ್ಲಿ ಸೂಚಿಸಿರುವ ಮಾರ್ಗದಲ್ಲಿ ಉತ್ತಮವಾದ ವಾತಾವರಣ ಕಾಪಾಡಿಕೊಳ್ಳಬೇಕು ಎಂದು ಮನಮೋಹನ್ ಸಿಂಗ್ ಕರೆ ನೀಡಿದರು.

ದೇಶದಲ್ಲಿ ಕಾನೂನು ಕೈಗೆ ತೆಗೆದುಕೊಳ್ಳಲು ಯಾರಿಗೂ ಅಧಿಕಾರ ನೀಡಿಲ್ಲ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು, ಗೋವು ರಕ್ಷಣೆ ಹೆಸರಿನಲ್ಲಿ ಮುಸ್ಲಿಮರು ಮತ್ತು ದಲಿತರ ಮೇಲೆ ದಾಳಿಗಳು ಹೆಚ್ಚಾಗುತ್ತಿರುವ ಬಗ್ಗೆ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು. ನಿನ್ನೆಯಷ್ಟೇ ಪ್ರಧಾನಿ ಮೋದಿ ಅವರು ಗೋ ಹತ್ಯೆ ನೆಪದಲ್ಲಿ ಮನುಷ್ಯರ ಹತ್ಯೆಗೆ ಅವಕಾಶವಿಲ್ಲ ಎಂದು ಹೇಳಿದ್ದರು.

-ಎನ್.ಬಿ.

Leave a Reply

comments

Related Articles

error: